ಬೆಂಗಳೂರು- ಕನ್ನಡ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ ರಚಿತಾ ರಾಮ್. ಇನ್ನೂ ಇವರ ಕೈಯಲ್ಲಿ ಅದೆಷ್ಟು ಸಿನಿಮಾಗಳಿವೆ ಎಂಬುವ ಲೆಕ್ಕ ಸಿಗುತ್ತಿಲ್ಲ. ಪ್ರತಿ ಸಿನಿಮಾದಲ್ಲಿ ತನ್ನ ವಿಭಿನ್ನ ನಟನೆಯ  ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಕನ್ನಡದಲ್ಲಿ ಮಾತ್ರವಲ್ಲದೇ, ತೆಲುಗಿನ ಸಿನಿಮಾ ಒಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಭಾರತ್ ರಿಯಾಲಿಟಿ ಶೋನಲ್ಲಿ ತಿರ್ಪುಗಾರರಾಗಿದ್ದಾರೆ.

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುವ ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಿ ಎಂಬ ಸುದ್ದಿ ಗಾಂಧೀ ನಗರದಲ್ಲಿ ಹರಿದಾಡುತ್ತಿದೆ. ಹೌದು ರಚಿತಾ ಮತ್ತು ಕೃಷ್ಣ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಚಿತ್ರಕ್ಕೆ ಇನ್ನೂ ಚಿತ್ರತಂಡ ಹೆಸರಿಟ್ಟಿಲ್ಲ. ಆದರೆ ಇದೊಂದು  ರೊಮ್ಯಾಂಟಿಕ್ ಲವ್   ಸ್ಟೋರಿಯಾಗಿದೆ. ಮೊದಲ ಬಾರಿಗೆ ದೀಪಕ್ ಗಂಗಾಧರ್ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಸಿನಿಮಾ ಶೂಟಿಂಗ್ ಆರಂಭವಾಗಿಲ್ಲ, ಚಿತ್ರತಂಡ ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನಲ್ಲಿ ಶೂಟಿಂಗ್ ಆರಂಭ ಮಾಡುವ ಪ್ಲ್ಯಾನ್ ಮಾಡಿದೆ.

ಡಾರ್ಲಿಂಗ್ ಕೃಷ್ಣ  ಅವರು ಕೂಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ‘ಲವ್ ಮಾಕ್ ಟೆಲ್- 2’ ಸಿನಿಮಾದ ನಿರ್ದೇಶನ್ ಮಾಡುತ್ತಿದ್ದಾರೆ. ಇನ್ನೂ ಕೃಷ್ಣ ಅವರ ಬಹು ಮುಖ್ಯ  ಘಟ್ಟ ಮದುವೆ, ಫೆಬ್ರವರಿ 14 ರಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೆಲ್ಲದರ ಮಧ್ಯೆಯೂ ದೀಪಕ್ ಗಂಗಾಧರ ನಿರ್ದೇಶಿಸುವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

 

Leave A Reply