ಮಂಡ್ಯ- ರಾಧಿಕಾ ಯಾರು ಅವರು ನನಗೆ ಗೊತ್ತೆ ಇಲ್ಲಾ . ಹೀಗೆ ಹೇಳಿದ್ದು ಯಾರು ಅಂತಾ ಗೊತ್ತಾ ಹೌದು ಹೀಗೆ ಹೇಳಿದ್ದು ಬೇರೆ ಯಾರು ಅಲ್ಲಾ ಅದು ಮಾಜಿ ಸಿ ಎಮ್ ಕುಮಾರ್ ಸ್ವಾಮಿ ಅವರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲೆಕೆರೆ  ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿಯಲ್ಲಿ ಹೇಳಿದ್ದಾರೆ. ಸಿಸಿಬಿಯಿಂದ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅದು ಯಾರೋ ನನಗೆ ಗೊತ್ತಿಲ್ಲ ಎಂದು ಅಚ್ಚರಿಯ ಉತ್ತರ ನೀಡಿದ್ದಾರೆ. ಸ್ವಾಮಿ ಅವರ ವಿಚಾರವಾಗಿ ಸಿಸಿಬಿ ಪೊಲೀಸರು ನಟಿ ಹಾಗೂ ಕುಮಾರ್ ಸ್ವಾಮಿ ಅವರ ಎರಡನೇ ಪತ್ನಿ ರಾಧಿಕಾ ಅವರಿಗೆ ಸಿಸಿಬಿ ನೋಟಿಸ್ ನೀಡಿದ  ಹಿನ್ನೆಲೆಯಲ್ಲಿ, ಸಿಸಿಬಿ ಪೋಲಿಸ್ ಠಾಣೆಗೆ ಕುದ್ದು ಹಾಜರಾಗಿ ವಿಚಾರಣೆ ಒಳಪಟ್ಟಿದ್ದರು.‌ಈ ವಿಚಾರವಾಗಿ ಮಾಜಿ ಸಿ ಎಮ್ ಕುಮಾರಸ್ವಾಮಿ ಈ ವೇಳೆ, ರಾಧಿಕಾ ವಿಚಾರವಾಗಿ, ‘ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ’ ಎಂದು ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Leave A Reply