ಬಳ್ಳಾರಿ-  ಗಣಿನಾಡಿನಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಇದೀಗ ಮಳೆಯಾಗುತ್ತಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ತುಂತುರು ಮಳೆ ಸುರಿಯಲಾರಂಭಿಸಿದ್ದು, ಕೆಲ ಹೊತ್ತು ನಿಂತಿತ್ತು. ಇದೀಗ ಧಾರಾಕಾರ ಮಳೆಯಾಗುತ್ತಿದ್ದು, ಕೆಲಕಾಲ ಜನಜೀವನ ದುಸ್ತರಗೊಂಡಿದೆ. ಸರ್ಕಾರಿ ಕಚೇರಿಗಳ ಮುಂದೆ ನಾನಾ ಅರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡು ನಿಂತವರು ಸೇರಿದಂತೆ ಹಲವರು ಸಮಸ್ಯೆ ಅನುಭವಿಸಿದ ದೃಶ್ಯಗಳು ಕಂಡುಬಂದಿವೆ.

Leave A Reply