ಬಳ್ಳಾರಿ- ಮುಂಬರುವ ಸಾರ್ವತ್ರಿಕ ಚುನಾವಣೆಗಳು ಮೇಲೆ ಎಲ್ಲರ ಕಣ್ಣು ಬಿದ್ದಿದೆ . ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳ ಎಮ್ ಎಲ್ ಎ ಚುನಾವಣೆ ತಯಾರಿ ನಡೆಸಿದ್ದಾರೆ . ಒಂದು ಕಡೆ ರಾಷ್ಟ್ರೀಯ ಪಕ್ಷಗಳು ಪಕ್ಷ ಬಲವರ್ಧನೆಗೆ ಕಸರತ್ತು ನಡೆಸಿದ್ರೆ ಮತ್ತೊಂದು ಕಡೆಯಲ್ಲಿ ಟಿಕೇಟ್ ಆಕಾಂಕ್ಷಿಗಳು ತೆರೆಮರೆಯಲ್ಲಿ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ. ಇನ್ನು ಗಣಿ ನಾಡು ಬಳ್ಳಾರಿಯಲ್ಲಿ ಸಹ ರಾಜಕೀಯ ನಾಯಕರ ಕಸರತ್ತು ತುಸು ಜೋರಾಗಿದ್ದು . ಕಳೆದ ಎರಡು ಮೂರು ವರ್ಷಗಳ ಬಳಿಕ ಕ್ಷೇತ್ರ ಜಿಲ್ಲೆಯ ಕಡೆಯಲ್ಲಿ‌ಮುಖ ಮಾಡಿದ್ದಾರೆ.

ಹೌದು ಇಂದು ಸಹ ಗಣಿ ನಾಡು ಬಳ್ಳಾರಿಯಲ್ಲಿ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯರಾದ  ಡಾ.ಸೈಯದ್ ನಾಸೀರ್ ಹುಸೇನ್ ಅವರ  ಸಹ ಸಂಸದರ ಕಚೇರಿಯನ್ನು ಉದ್ಘಾಟನೆ ಮಾಡಿದ್ದಾರೆ. ಸದ್ಯ ರಾಜ್ಯ ಸಭಾ ಸದಸ್ಯರಾಗಿರುವ ಅವರು ಕಳೆದ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದ್ರೆ ಈ ವರ್ಷ ಚುನಾವಣೆ ಎರಡು ವರ್ಷ ಇರುವಾಗಲೇ ಚುನಾವಣೆ ತಯಾರಿಯಲ್ಲಿ ತೊಡಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ. ಬಳ್ಳಾರಿಯ

ಬುಡಾ ಕಚೇರಿ ಆವರಣದಲ್ಲಿರುವ ಬುಡಾ ಕಾಂಪ್ಲೆಕ್ಸ್ ನಲ್ಲಿ ಕಚೇರಿ ಉದ್ಘಾಟಿಸಲಾಯಿತು. ಜಿಲ್ಲೆಯ ಜನರು ತಮ್ಮ ದೂರು-ದುಮ್ಮಾನ ಹೊತ್ತುಕೊಂಡು ಬರುವವರಿಗೆ ತಕ್ಷಣ ಸ್ಪಂದಿಸುವುದಕ್ಕಾಗಿ ಸಂಸದರ ಕಚೇರಿ ಆರಂಭಿಸಲಾಗಿದೆ ಎಂದಿದ್ದಾರೆ. ಆದ್ರೆ ಅವರ ಪಕ್ಷದವರೇ  ಹೇಳುವ ಪ್ರಕಾರ ನಾಸೀರ್ ಸರ್ ಈ ಸಾರಿ ನಗರದಿಂದ ಸ್ಪರ್ಧೆ ಮಾಡುವುದು ಪಕ್ಕಾ ಎನ್ನುತ್ತಿದ್ದಾರೆ.

About Author

Priya Bot

Leave A Reply