ಬಳ್ಳಾರಿ- ಸಚಿವ ಆನಂದಸಿಂಗ್ ಅವರು ರಾಜಕೀಯ ಮಾಡೋದನ್ನ ಚೆನ್ನಾಗಿ ಕಲಿತಿದ್ದಾನೆ.‌ ನನ್ನ ಸಹೋದರ ಗಾಲಿ ಜನಾರ್ದನರೆಡ್ಡಿಯವ್ರು ಆತನಿಗೆ ಚೆನ್ನಾಗಿ‌ ರಾಜ ಕೀಯ‌ ಮಾಡೋದನ್ನ ಕಲಿಸಿದ್ದಾನೆಂದು ಬಳ್ಳಾರಿ ನಗರ ಶಾಸಕ ಗಾಲಿ‌ ಸೋಮಶೇಖರರೆಡ್ಡಿ ವಾಗ್ದಾಳಿ‌ ನಡೆಸಿ ದ್ದಾರೆ.

ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿಂದು ರಸ್ತೆ ಅಭಿವೃದ್ಧಿಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರೆಡ್ಡಿಯವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಇಲ್ಲೊಂದು ಮಾತನಾಡುತ್ತಾನೆ. ಅಲ್ಲೊಂದು ಮಾತನಾಡುತ್ತಾನೆ. ರಾಜಕೀಯ ಚೆನ್ನಾಗಿ ಮಾಡೋ ದನ್ನ ಕಲಿತಿದ್ದಾನೆಂದು ಏಕವಚನದಲ್ಲೇ ಶಾಸಕ‌ ಗಾಲಿ ಸೋಮಶೇಖರರೆಡ್ಡಿಯವರು ವಾಗ್ದಾಳಿ ನಡೆಸಿದ್ದಾರೆ ‌

ಮಾಜಿ ಸಚಿವ ಗಾಲಿ‌ ಜನಾರ್ದನ ರೆಡ್ಡಿ ರಾಜಕೀಯಕ್ಕೆ ಕರೆತಂದು ತಪ್ಪು ಮಾಡಿದ್ರು…? ಜನಾರ್ದನ ರೆಡ್ಡಿ ಆನಂದ್ ಸಿಂಗ್ ಬೆಳೆಸಿ ತಪ್ಪು ಮಾಡಿದ್ರು ಎಂದು ಪರೋಕ್ಷವಾಗಿ ಸೋಮಶೇಖರರೆಡ್ಡಿ ಟಾಂಗ್ ನೀಡಿ ದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಬಿಟ್ಟು ಕೊಡುವುದಲ್ಲ, ನಾವೇ ಬೇಡ ಅಂತಾ ಹೇಳಿದ್ದೇವೆ. ಈ ಜಿಲ್ಲೆ ಇಬ್ಬಾಗ ಮಾಡಿದವರು ಜಿಲ್ಲಾ ಉಸ್ತುವಾರಿ ಸಚಿವರಿರುವುದು ನಮಗೆ ಇಷ್ಟ ಇಲ್ಲ. ಇದನ್ನ ಸಿಎಂ ಬಿಎಸ್ ವೈ ಗಮನಕ್ಕೆ ತಂದಿದ್ದೇನೆ. ಸಚಿವ ಶ್ರೀರಾಮುಲು ಜಿಲ್ಲಾ ಉಸ್ತುವಾರಿಯಾದ್ರೆ ನಮಗೆ ಒಳ್ಳೆಯದು. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಅವಧಿಯಲ್ಲಿ ಅದಂತಹ ಅಭಿವೃದ್ಧಿ ಆಗುತ್ತೆ. ರಾಮಮಂದಿರದಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣವಾಗುತ್ತೆ, ಈತ್ತ

ಬಳ್ಳಾರಿಗೆ ರಾಮುಲು ಬಂದ್ರೆ ಒಳ್ಳೆದಾಗುತ್ತೆ.‌ ಸಚಿವ ಆನಂದಸಿಂಗ್ ಒಳಗೊಂದು- ಹೊರಗೊಂದು ಮಾತನಾಡುತ್ತಾರೆ. ಅಖಂಡ ಜಿಲ್ಲೆಗಾಗಿ ಕಾನೂನು ಹೋರಾಟ ನಡೆಸುವವರಿಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದ್ರು ಶಾಸಕ ಗಾಲಿ ಸೋಮ ಶೇಖರರೆಡ್ಡಿ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply