ಬಳ್ಳಾರಿ- ರಾಜ್ಯದ ರಾಜಕಾರಣಿಗಳ ಚಿತ್ತ ಸಚಿವ ಸಂಪುಟ ವಿಸ್ತರಣೆ ಮೇಲಿದೆ. ಆದ್ರೆ. ಸಚಿವ ಸಂಪುಟ ವಿಸ್ತರಣೆ ಕಸರತ್ತು ಮಧ್ಯೆ ಮತ್ತೊಮ್ಮೆ ಬಳ್ಳಾರಿ ರೆಡ್ಡಿಗಳ ಆಟ ಪ್ರಾರಂಭವಾಯ್ತಾ ಎನ್ನುವ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ.  ಅದಕ್ಕೆ ಕಾರಣ ರೆಡ್ಟಿಗಾರು ಧಿಡೀರ್ ದೆಹಲಿಯಲ್ಲಿ  ಶಾಸಕ ಸೋಮಶೇಖರ ರೆಡ್ಡಿ ಪ್ರತ್ಯಕ್ಷವಾಗಿದ್ದಾರೆ. ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಮೇಲ್ನೋಟಕ್ಕೆ ಬಳ್ಳಾರಿಗೆ ಸ್ಮಾರ್ಟ್ ಸಿಟಿ ಮಾಡಲು ಬೇಡಿಕೆ ಇಡಲು ಹೋಗಿದ್ದಾರೆ ಎನ್ನಲಾಗ್ತಿದೆ, ಆದ್ರೇ ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡೋ ಮೂಲಕ ಸಚಿವ ಸ್ಥಾನದ ಲಾಭಿಗೆ ಯತ್ನ ನಡೆದಿದೆ ಎನ್ನಲಾಗ್ತಿದೆ.

ರೆಡ್ಡಿಗಳು ಒಂದು‌ಕಡೆ ಬಳ್ಳಾರಿ ಜಿಲ್ಲೆಯನ್ನೆ  ಕಳೆದುಕೊಂಡಿದ್ದಾರೆ. ಇನ್ನೇನು ಬಳ್ಳಾರಿ ವಿಭಜನೆಯಾಗಿ ವಿಜಯನಗರ ಜಿಲ್ಲೆಯಾಗೋದು ಬಹುತೇಕ ಖಚಿತವಾಗಿದೆ. ಒಂದು ವೇಳೆ ಬಳ್ಳಾರಿ ಜಿಲ್ಲೆ ವಿಭಜನೆಯಾದ್ರೇ ಬಳ್ಳಾರಿಗೊಂದು ಸಚಿವ ಸ್ಥಾನ ನೀಡಬೇಕೆನ್ನುವುದು ರೆಡ್ಡಿಗಳವಾದ. ಇನ್ನೂ ಸೋಮಶೇಖರ ರೆಡ್ಡಿ ಜೊತೆಗೆ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಕೂಡ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಶ್ರೀರಾಮುಲು, ಜನಾರ್ದನ ರೆಡ್ಡಿ  ಮತ್ತು ಕರುಣಾಕರ ರೆಡ್ಡಿ ಮೂವರು ಸಚಿವರಾಗಿದ್ದಲ್ಲದೇ ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದರು.ಇದೀಗ ಶ್ರೀರಾಮುಲು ಬಿಟ್ರೇ ಕಳೆದ ಏಳು ವರ್ಷದಿಂದ ರೆಡ್ಡಿ ಬ್ರದರ್ಸ್ ಗೆ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ಸೋಮಶೇಖರ್ ರೆಡ್ಡಿ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

About Author

Priya Bot

Leave A Reply