ಬಳ್ಳಾರಿ ಜಿಲ್ಲೆ ಕೊಟ್ಟೂರು: ಕೋವಿಡ್ ಎರಡನೇ ಅಲೆಗೆ ದೇಶವೆ ತತ್ತರಿಸಿದ್ದು, ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಆದದರಿಂದ ದೇಶದ ದೇವಸ್ಥಾನಗಳು, ಮಠಗಳು ಮುಚ್ಚಿರುವುದರಿಂದ ಭಕ್ತರಿಗೆ ದೇವಸ್ಥಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳಲು ಅವಕಾಶ ಸಿಗದಿರುವುದನ ಮನಃಗಂಡ ಐಕ್ಯತಾ ಮಂಡಳಿ ಸದಸ್ಯರು ಆನ್ ಲೈನ್ ಮೂಲಕ ಪ್ರವಚನ ಆಯೋಜಿಸಿದ್ದಾರೆ.

ಜೂನ್ 1 ರಿಂದ ಆರಂಭವಾದ ಕಾರ್ಯಕ್ರಮ ನಿತ್ಯ ಸಂಜೆ 6 ರಿಂದ ರಾತ್ರಿ 8.30 ರವರೆಗೆ ಗೂಗಲ್ ಮಿಟಿಂಗ್ ನಲ್ಲಿ ನಡೆಯುತ್ತದೆ,ಜುಲೈ 24 ರ ಗುರುಪುರ್ಣಿಮೆವರೆಗೆ ನಡೆಯಲಿದೆ, ಕಾರ್ಯಕ್ರಮದಲ್ಲಿ ಉಜ್ಜಿನಿ ಶ್ರೀ ಸಿದ್ದಲಿಂಗ ಶಿವಾಚಾರ್ಯರು,ಕಾಶಿಯ ಡಾ.ಚಂದ್ರಶೇಖರ ಸ್ವಾಮಿಜಿ, ಶ್ರೀ ಶೈಲ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶ್ರೀಗಳೂ ಸೇರಿ ನಾಡಿನ ನೂರಾರು ಮಠದೀಶರು,ಶಿವಾಚಾರ್ಯ ಸ್ವಾಮಿಗಳು ಅಶಿರ್ವಚನ ನೀಡಲಿದ್ದಾರೆ.

ಆನ್ ಲೈನ್ ಕಾರ್ಯಕ್ರಮದಲ್ಲಿ ಪ್ರವಚನ, ಧರ್ಮದ ಬಗ್ಗೆ ವಿಚಾರಣ ಸಂಕೀರ್ಣ, ಪೂರ್ವ ಜಗದ್ಗುರುಗಳ ಹಾಗೂ ಸರ್ವಜ್ಙ, ಶರಣರ ವಿಚಾರಗಳ ವಿಚಾರ ವಿಮರ್ಶೆ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಐಕ್ಯತಾ ಮಂಡಳಿ ರಾಜ್ಯ ಸಂಘಟನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಮಠದ ತಿಳಿಸಿದರು.
ಗೂಗಲ್ ಮಿಟಿಂಗ್ ನಲ್ಲಿ ನಿತ್ಯ 300-600 ಜನರು ಪಾಲ್ಗೊಳುವುದರ ಮೂಲಕ ಧಾರ್ಮಿಕ ಕಾರ್ಯಕ್ರಮಗಳನ್ನು ವಿಕ್ಷಣೆ ಮಾಡುತ್ತಿದ್ದಾರೆ, ಯುಎಸ್ಎ ನಲ್ಲಿರುವ ಗಂಗಾಧರ್ ಮಠದ್ ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದಾರೆ, ಗೂಗಲ್ ಮಿಟಿಂಗ್ ನಲ್ಲಿ ಭಾಗವಹಿಸುವವರು 9742111008. 9986665171 ಈ ನಂಬರ್ ಗಳನ್ನು ಸಂಪರ್ಕಿಸ ಬಹುದಾಗಿದೆ.

ನಮ್ಮ ಮನೆಯಲ್ಲಿ ನಿತ್ಯ ಸಂಜೆ ಆಯಿತೆಂದರೆ ಮಕ್ಕಳು ವಿಭೂತಿ ಹಚ್ಚಿಕೊಂಡು ಸಿದ್ದರಾಗಿ ಕಾರ್ಯಕ್ರಮದ ವಿಕ್ಷಣೆಗೆ ತಯಾರಾಗುತ್ತಾರೆ, ನಮ್ಮ ಮನೆಯವರೊಂದಿಗೆ ಸೇರಿ ಆನ್ ಲೈನ್ ಕಾರ್ಯಕ್ರಮದಲ್ಲಿ ಪಾಲ್ಗೊಳುತ್ತವೆ ಎನ್ನಯತ್ತಾರೆ ರವಿಕುಮಾರ್. ಐಕ್ಯತಾ ಮಂಡಳಿಯಲ್ಲಿ ಸತೀಶ್ ಅರಾಧ್ಯ, ಸತೀಶ್ ಕೆಂಬಾವಿ ಮಠ್, ಮಲ್ಲಿಕಾರ್ಜುನಯ್ಯ ಮಠದ್, ಕಾಶಿನಾಥ್ ಹಿರೇಹಳ್ಳಿ, ದಿನೇಶ್ ಕುಮಾರ್ ಮೈಲನಹಳ್ಳಿ್ ಇತರರಿದ್ದಾರೆ.

ಲಾಕ್ ಡೌನ್ ಸಂಧರ್ಭದಲ್ಲಿ ದೇವಸ್ಥಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲದ್ದರಿಂದ ಈ ಕಾರ್ಕ್ರಮ ರೂಪಿಸಿದ್ದೆವೆ, ಇತ್ತೀಚೆಗೆ ಮಾಬೈಲ್ ಬಳಕೆಯಿಂದ ಮಕ್ಕಳು ಮಗ್ದರಾಗಿರುವದರಿಂಧ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಐಕ್ಯತಾ ಮಂಡಳಿ ರಾಜ್ಯ ಸಂಘಟನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಮಠದ್ ತಿಳಿಸಿದರು.

IMG-20210612-WA0031.jpg

Email

Huligesh Tegginakeri

About Author

Huligesh Tegginakeri

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕಳೆದ ಎಂಟು ವರ್ಷಗಳ ಕಾಲ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದೇನೆ.. ವಿಶೇಷ, ವಿಭಿನ್ನ ರೀತಿಯ ಸುದ್ದಿಗಳನ್ನು ಕಲೆಹಾಕಿ ಬರೆಯುವುದೇ ನನ್ನ ಹವ್ಯಾಸ..

Leave A Reply