ಬಸ್ ವ್ಯವಸ್ಥೆ ಒದಗಿಸುವಂತೆ ಒತ್ತಾಯಿಸಿ ಎಂ. ಸೂಗೂರು ವಿದ್ಯಾರ್ಥಿಗಳು ಮನವಿ ಸಿರುಗುಪ್ಪ. ಮಾ.1 ಮಣ್ಣೂರು ಸೂಗೂರು ಮಾರ್ಗದಿಂದ ಕಂಪ್ಲಿಗೆ ಹೋಗುವ ಬಸ್ಸುಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿ ಮಣ್ಣೂರು ಸೂಗೂರು ವಿದ್ಯಾರ್ಥಿಗಳು ಸೋಮವಾರ ಸಿರುಗುಪ್ಪ ಈ. ಕ. ರಾ. ರ. ಸಾ ಘಟಕದ ವ್ಯವಸ್ಥಾಪಕರಿಗೆ ಹಾಗೂ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಬಾಬು ಅವರಿಗೆ ಮನವಿ ಸಲ್ಲಿಸಿದರು. ಇದೆ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಎಂ. ಸೂಗೂರು ಗ್ರಾಮದಿಂದ ಕಂಪ್ಲಿ ಗೆ ಹಾಗೂ ಗಂಗಾವತಿಗೆ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿದ್ದು, ಸರಿಯಾದ ರೀತಿಯಲ್ಲಿ ಬಸ್ಸು ಗಳ ವ್ಯವಸ್ಥೆ ಇಲ್ಲದಾಗಿದೆ. ಬೆಳಿಗ್ಗೆ 7 ಗಂಟೆಗೆ ಮತ್ತು 9 ಗಂಟೆಗೆ ಇದ್ದು ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದಕ್ಕೆ ತೀವ್ರ ತೊಂದ್ರೆ ಆಗಿದೆ. ಅಲ್ಲದೆ ಕ್ಲಾಸ್ ಗಳು ತಪ್ಪುತ್ತಿದ್ದು ಶಿಕ್ಷಣದಿಂದ ವಂಚಿತ ರಾಗುವಂತಾಗಿದೆ. ಆದ್ದರಿಂದ ಈಗಾಗಲೇ ಬರುತ್ತಿರುವ ಬಸ್ಸುಗಳು ಸಮಯ ಚೇಂಜ್ ಮಾಡಿ ಬಸ್ಸುಗಳು ಬಿಡಬೇಕು. ಇನ್ನೂ ಅದರ ಜೊತೆಗೆ 8ಗಂಟೆಗೆ ಹೆಚ್ಚುವರಿ ಬಸ್ ಒದಗಿಸಬೇಕು ಎಂದು ಒತ್ತಾಯಿಸಿದರು. ನಂತರ ಕದಸ ಭೀಮವಾದ ಸಂಘಟನೆಯ ತಾಲೂಕು ಸಂಚಾಲಕ ಖಾದರಲಿಂಗ ಮಾತನಾಡಿ, ಎಂ. ಸುಗುರಿಂದ ಕಂಪ್ಲಿ ಗೆ ಮಾರ್ಗಕ್ಕೆ ಬರುತ್ತಿರುವ ಬಸ್ ಗಳು ನಿಗದಿತ ಸಮಯಕ್ಕೆ ಸರಿಯಾಗಿ ಬಿಡಬೇಕು ಜೊತೆಗೆ ಹೆಚ್ಚುವರಿ ಬಸ್ ಕಲ್ಪಿಸಿ ವಿದ್ಯಾರ್ಥಿಗಳ ಶಿಕ್ಷಣ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಬೇಕು ಇಲ್ಲ ವಾದಲ್ಲಿ ನೂರಾರು ವಿದ್ಯಾರ್ಥಿಗಳ ಜೊತೆಗೆ ವಿವಿಧ ಪ್ರಗತಿಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕದಸಸ ಭೀಮವಾದ ಸಂಘಟನಾ ಸಂಚಾಲಕರು ಬಳಪ್ಪ. ಸುಧಾಕರ್ ಮಣ್ಣೂರು, ವಿದ್ಯಾರ್ಥಿಗಳಾದ ಶಿವು, ಜಡೇಶ್, ಎಂ. ರಮೇಶ್, ವಸಂತ ಸೇರಿದಂತೆ ಇತರರು ಇದ್ದರು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply