ರಾಜೀನಾಮೆ ನೀಡುವುದು ಮುಗಿದ ಅಧ್ಯಾಯ..!

0

ಬೆಳಗಾವಿ – ರಾಸಲೀಲೆ ಸಿಡಿ ವಿಚಾರದಿಂದ ವಿಚಲಿತರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ರಾಜೀನಾಮೆ ನೀಡುವ ವಿಚಾರವಾಗಿ ಯು ಟರ್ನ್ ತೆಗೆದುಕೊಂಡಿದ್ದಾರೆ‌.  ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡುವ‌ ವಿಚಾರ ಮುಗಿದು ಹೋದ ಅಧ್ಯಾಯ‌ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ಕೊಡಲು ತಯಾರಾಗಿದ್ದೆ. ಆದ್ರೆ ನನ್ನ ಬೆಂಬಲಿಗರು ಹಿತೈಷಿಗಳು ಕೆಲವರ ಒತ್ತಾಯಕ್ಕೆ ಮನಿದು ನಾನಾ ರಾಜೀನಾಮೆ ಇಂದ ಹಿಂದೆ ಸರಿಯುತ್ತಿರುವ ಎಂದಿದ್ದಾರೆ. ‌ಇನ್ನು ನಾನು ರಾಜೀನಾಮೆ ಕೊಡುತ್ತೆನೆ ಎಂದು ನಾ ಹೇಳಿದ್ದು, ನಿಜ ನಾ ಈಗಲೂ ಅದನ್ನಾ ನಾನು ಒಪ್ಪಿಕೊಳ್ಳುವೆ. ಕಲವರ ಒತ್ತಾಯ ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ನೀಡುತಿಲ್ಲಾ ಎಂದಿದ್ದಾರೆ. ‌

ನಾನು‌ ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಡಿದ್ದು ನಿಜ. ಆದರೆ ನನ್ನ ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ ಹಿನ್ನೆಲೆ ರಾಜೀನಾಮೆ ವಿಚಾರ ಕೈಬಿಟ್ಟಿದ್ದೇನೆ ಎಂದರು. ಕೆ ಆರ್ ಎಸ್ ಬಿರುಕಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸಮಲತಾ ಅಂಬರೀಶ್ ನಡುವೆ ಟಾಕ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರು ಏನ್ ಮಾತನಾಡಿದ್ದಾರೆ ಜಾಸ್ತಿ ಮಾಹಿತಿ ಇಲ್ಲ. ಎಂಡಿ ಅವರು ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಂಡಿ ಹೇಳುವುದು ಫೈನಲ್. ಸುಮಲತಾ ಅವರು ಯಾಕೆ ಹೀಗೆ ಹೇಳಿದರು ಅಂತ ನನಗೆ ಗೊತ್ತಿಲ್ಲ ಎಂದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply