ಕಲಬುರಗಿ- ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆಯ ಎರಡನೇ ಹಂತದಲ್ಲಿ ಕಳೆದ ಡಿ.27 ರಂದು ಚಿತ್ತಾಪುರ ತಾಲೂಕಿನ 24 ಗ್ರಾಮ ಪಂಚಾಯತಿಗಳ 133 ಕ್ಷೇತ್ರಗಳ 410 ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ತಾಲೂಕಿನ ಒಟ್ಟು 24 ಗ್ರಾಮ ಪಂಚಾಯತಿಗಳಾದ ಗುಂಡಗೂರ್ತಿ, ಇವಣಿ, ಮಾಡಬೂಳ, ದಂಡೋತಿ, ದಿಗ್ಗಾಂವ, ಮೊಗಲಾ, ಸಾತನೂರ, ಪೇಠಶಿರೂರ, ಮುಗಳನಾಗಾಂವ, ಭಾಗೋಡಿ, ಮಾಲಗತ್ತಿ, ರಾವೂರ, ಕಮರವಾಡಿ, ಕರದಾಳ, ಹಲಕಟ್ಟಾ, ಇಂಗಳಗಿ, ಲಾಡ್ಲಾಪುರ, ಅಳ್ಳೊಳ್ಳಿ, ಭೀಮನಳ್ಳಿ, ಆಲೂರ (ಬಿ), ಯಾಗಾಪುರ, ನಾಲವಾರ, ಕಡಬೂರ ಹಾಗೂ ಸನ್ನತಿಯ 133 ಕ್ಷೇತ್ರಗಳ ಒಟ್ಟು 410 ಸ್ಥಾನಗಳ ಪೈಕಿ ಈಗಾಗಲೆ 89 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 321 ಅಭ್ಯರ್ಥಿಗಳ ಆಯ್ಕೆಗಾಗಿ ಡಿ.27 ರಂದು ಚುನಾವಣೆ ನಡೆದಿತ್ತು.ಇಂದು  ನಡೆದ ಮತ ಎಣಿಕೆಯಲ್ಲಿ ಈ 321 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಒಟ್ಟು 410 ಸ್ಥಾನಗಳ ಭರ್ತಿಗೆ 200 ಸ್ಥಾನ ಸಾಮಾನ್ಯ ಮತ್ತು 210 ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು.

410 ಸದಸ್ಯ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ವರ್ಗವಾರು ಅಭ್ಯರ್ಥಿಗಳನ್ನು ನೋಡಿದಾಗ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-56 ಮತ್ತು ಮಹಿಳಾ-68 ಸೇರಿದಂತೆ 124 ಅಭ್ಯರ್ಥಿಗಳಿದ್ದಾರೆ. ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳ ಪೈಕಿ 24 ಮಹಿಳಾ ಅಭ್ಯರ್ಥಿಗಳಿದ್ದಾರೆ. ಹಿಂದುಳಿದ “ಅ” ವರ್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-17 ಮತ್ತು ಮಹಿಳಾ-32 ಸೇರಿದಂತೆ 49 ಅಭ್ಯರ್ಥಿಗಳಿದ್ದಾರೆ. ಹಿಂದುಳಿದ “ಬ” ವರ್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-8 ಮತ್ತು ಮಹಿಳಾ-4 ಸೇರಿದಂತೆ 12 ಅಭ್ಯರ್ಥಿಗಳು ಹಾಗೂ ಸಾಮಾನ್ಯ ವರ್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-119 ಮತ್ತು ಮಹಿಳಾ-82 ಸೇರಿದಂತೆ 201 ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

ಚಿತ್ತಾಪೂರ ಪಟ್ಟಣದ ಶ್ರೀ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು, ಫಲಿತಾಂಶ ತಿಳಿಯಲು ಕುತೂಹಲದಿಂದ ಸಾವಿರಾರು ಜನ ಅಭ್ಯರ್ಥಿಗಳ ಬೆಂಬಲಿಗರು ಮತ ಎಣಿಕೆ ಕೆಂದ್ರದ ಹೊರಗಡೆ ನೆರಿದಿದ್ದರು, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

About Author

Priya Bot

Leave A Reply