ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಜಲ, ಭೂಮಿ ಇವೆಲ್ಲ ತಮ್ಮದೇ ಆದ ಧರ್ಮವನ್ನು ಪಾಲಿಸುತ್ತಿವೆ. ಉದಾಹಣೆಗೆ ಅಗ್ನಿಯು ತನ್ನ ಸುಡುವ ಧರ್ಮವನ್ನು ಕಳೆದುಕೊಂಡು ನೀರಿನಗಿಂತಲೂ ತಂಪಾದರೆ ನಾವು ಜೀವಿಸಲು ಸಾಧ್ಯವೇ ? ಇಲ್ಲ. ಏಕೆಂದರೆ ಅಗ್ನಿಯಿಂದ ಅನ್ನವನ್ನು ಬೆಯಿಸಿಕೊಳ್ಳಬೇಕು. ಅದರಿಂದ ಪ್ರಕಾಶ (ಬೆಳಕು) ಪಡೆದುಕೊಳ್ಳಬೇಕು. ಆದ್ದರಿಂದ ಇದು ತನ್ನದೇ ಆದ ಸುಡುವ ಶಕ್ತಿಯನ್ನು (ಧರ್ಮವನ್ನು) ಕಳೆದುಕೊಳ್ಳುವುದಿಲ್ಲ. ಇದೊಂದು ನೈಸರ್ಗಿಕ ಸ್ವಧರ್ಮ ಎಂದು ಹೇಳಬಹುದು.
ನಮ್ಮ ದೇಹೇಂದ್ರಿಯಗಳ ಕುರಿತು ವಿಚಾರ ಮಾಡಿದರೆ ಪಂಚಜ್ಞಾನೇಂದ್ರಿಗಳಲ್ಲಿ, ಪಂಚಕಮೇಂದ್ರಿಗಳಲ್ಲಿ, ಪಂಚಅಂತಃಕರಣಗಳು, ಪಂಚಪ್ರಾಣಗಳಲ್ಲಿ ಯಾವುದಾದರೊಂದು ಇಂದ್ರಿಯಗಳು ತಮ್ಮ ಧರ್ಮ(ಕೆಲಸ)ವನ್ನು ಪಾಲಿಸದೆ ತಟಸ್ಥವಾದರೆ ಎಷ್ಟು ಕಷ್ಟವಾಗುತ್ತದೆ ಗೋತ್ತೇ? ಅಲ್ಲದೇ ತಮ್ಮ ತಮ್ಮ ಕಾರ್ಯ ಕಾರ್ಯವನ್ನು ತಾವೇ ಮಾಡದೇ ಬೇರೊಂದು ಇಂದ್ರಿಯಗಳಿಂದ ಮಾಡಿಸಿದರೂ ಕಷ್ಟವೇ ಹೌದು. ಆದ್ದರಿಂದ ಇಂದ್ರಿಯಗಳೆಲ್ಲವು ಸ್ವಂತ ಕಾರ್ಯಗಳನ್ನು ಸ್ವತಃ ಮಾಡಿಕೊಂಡರೆ ದೇಹವು ಆರೋಗ್ಯದಿಂದ ಇರಲು ಸಾಧ್ಯ.
ಜಗತ್ತಿನಲ್ಲಿ ಪ್ರತಿಯೊಬ್ಬನು ತಮ್ಮ ಹುದ್ದೆಯ ಕೆಲಸವನ್ನು ತಾವೇ ಮಾಡುತ್ತಾರೆ ವಿನಹ ಬೇರೆಯವರ ಕಡೆಯಿಂದ ಮಾಡಿಸುವುದಿಲ್ಲ. ತನ್ನ ಮಕ್ಕಳಿಂದಾಗಲಿ, ಬಂಧುಜನರಿಂದಾಗಲಿ ತನ್ನ ಹುದ್ದೆಯ ಕೆಲಸವನ್ನು ಮಾಡಿಸದೆ ತಾವೇ ಮಾಡಿಕೊಳ್ಳುತ್ತಿರುತ್ತಾರೆ. ಆಫಿಸ್ ಕೆಲಸ ಆಫಿಸರ್ ಮಾಡುವುದು ಬಿಟ್ಟು ಕ್ಲಾರ್ಕ ಕೆಲಸ ಮಾಡಿತ್ತಾನೆಯೇ? ಇಲ್ಲ. ಇಲ್ಲಿ ಅವರು ಸಹ ಸ್ವಧರ್ಮವನ್ನು ಪಾಲಿಸುತ್ತಾರೆ.
ಆಶ್ರಮಗಳಾದ ಬ್ರಹ್ಮಚಾರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಗಳು ಹಿಂದು ಧರ್ಮದ ಹಿಂದಿನಿಂದ ಬಂದ ಆಶ್ರಮ ಪದ್ಧತಿಯಾಗಿವೆ. ಒಬ್ಬ ತನ್ನ ಜೀವಿತ ಅವಧಿಯಲ್ಲಿ ಈ ನಾಲ್ಕು ಆಶ್ರಮವನ್ನು ಅನುಭವಿಸಿದರೆ ಮೋಕ್ಷವನ್ನು ಹೊಂದುವನೆಂದು ಪ್ರತೀತಿ. ಅದು ಏನೇ ಇರಲಿ ಈ ನಾಲ್ಕು ಆಶ್ರಮದಲ್ಲಿ ಬ್ರಹ್ಮಚಾರಿಯ ಕೆಲಸಗಳಾದ ಅಧ್ಯಯನ, ಗುರುಗಳ ಸೇವೆ ಮಾಡಿವುದು. ಈ ಕೆಲಸ ಗ್ರಹಸ್ಥನು ಮಾಡಲು ಸಾಧ್ಯವೇ? ಗ್ರಹಸ್ಥನ ಕೆಲಸಗಳಾದ ಮದುವೆಯಾಗುವುದು, ಮಕ್ಕಳನ್ನು ಹೆರುವುದು, ಅವರನ್ನು ಸಾಕುವುದು ಮುಂತಾದ ಕೆಲಸವನ್ನು ಬ್ರಹ್ಮಚಾರಿ ಮಾಡಲು ಸಾಧ್ಯವೇ? ಹೀಗೆ ಇಲ್ಲಿಯೂ ಸಹ ಸ್ವಧರ್ಮವನ್ನು ಪಾಲಿಸಬೇಕಾಗುತ್ತದೆ.
ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರರು ತಮ್ಮ ತಮ್ಮದೇ ಧರ್ಮವನ್ನು ಪಾಲಿಸಬೇಕಾಗುತ್ತದೆ. ಇಲ್ಲಿ ಕ್ಷತ್ರಿಯನು ಕ್ಷಾತ್ರಧರ್ಮವನ್ನು ಬಿಟ್ಟು ಬ್ರಾಹ್ಮಣ, ವೈಶ್ಯ ಇಲ್ಲವೇ ಶೂದ್ರ ವರ್ಣಕ್ಕೆ ಸೇರಿದರೆ ಹೇಗಿರುತ್ತದೆಂಬುವುದನ್ನು ಶ್ರೀ ಕೃಷ್ಣ ಪರಮಾತ್ಮನು ಗೀತೆಯಲ್ಲಿ ಅರ್ಜುನನ್ನು ಕುರಿತು ಅರ್ಜುನನಿಗೆ ತನ್ನ ಸ್ವಧರ್ಮವಾದ ಕ್ಷತ್ರಿಯತೆಯನ್ನು ಬಿಡಬೇಡವೆಂದು ತಿಳಿಸಿದ್ದಾನೆ.
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ |
ಸ್ವಧರ್ಮೇ ನಿದನಂ ಶ್ರೇಯಃ ಪರಧರ್ಮೋ ಭಯಾವಹಃ ||
ಅಂದರೆ ಚನ್ನಾಗಿ ಆಚರಿಸಲ್ಪಟ್ಟ ಬೇರೆಯವರ ಧರ್ಮಕ್ಕಿಂತ ಗುಣ ರಹಿತವಾದರೂ ತನ್ನ ಧರ್ಮವೇ ಶ್ರೇಷ್ಠವಾದುದು. ತನ್ನ ಧರ್ಮದಲ್ಲಿ ಮರಣ ಸಂಭವಿಸಿದರೂ ಶ್ರೇಯಸ್ಕರವಾಗಿದೆ. ಮತ್ತು ಬೇರೆಯವರ ಧರ್ಮವನ್ನಾಚರಿಸುವುದು ಭಯವನ್ನುಂಟು ಮಾಡುವುದು.
ಅನೇಕ ಯೋಗಿಗಳು ಯಜ್ಞ ಮಾಡುತಿದ್ದಾಗ ಎಲ್ಲಿಂದಲೋ ಒಂದು ಚೇಳು ಬಂದಿತ್ತು. ಗುರುಗಳು ಅದು ಬೆಂಕಿಯಲ್ಲಿ ಸತ್ತು ಹೋಗುವುದೆಂದು ಅದನ್ನು ತಗೆಯಲು ಪ್ರಯತ್ನಿಸುತಿದ್ದಾಗ ತನ್ನ ಕೊಂಡಿಯಿಂದ ಅವರ ಕೈಗೆ ಹೊಡೆಯುತಿತ್ತು. ಆಗ ಕೈಯಿಂದ ಬಿಡುತಿದ್ದರು. ಹೀಗೆ ಅನೇಕ ಸಲ ನಡೆಯಿತು. ಶಿಷ್ಯರು, ಗುರುಗಳೆ ಅದು ಸಾಯುತಿದ್ದದ್ದು ಅದಕ್ಕೆ ಗೊತ್ತಿದೆ ಅದು ನಿಮಗೆ ಕಚ್ಚಿತಿದೆ. ಅದನ್ನು ಹೊರ ತಗೆಯುವ ಪ್ರಯತ್ನ ಬಿಟ್ಟುಬಿಡಿರಿ ಎಂದಾಗ ಗುರುಗಳು ಅದು ಅದರ ಧರ್ಮ, ಅದನ್ನು ಕಾಪಾಡುವುದು ನನ್ನ ಧರ್ಮ ಎಂದರು. ಇಲ್ಲಿ ಕಥೆ ಮುಖ್ಯವಲ್ಲ. ಧರ್ಮ ಮುಖ್ಯ. ನಾವು ತಿಳಿಯಬೇಕು.
ಲಾಭಕ್ಕಾಗಿ ಸುಖಕ್ಕಾಗಿ ಧರ್ಮವನ್ನು ಬಿಡಬೇಡ “ಧರ್ಮೋ ರಕ್ಷತಿ ರಕ್ಷತಃ” ಎಂದಿದೆ ಶಾಸ್ತ್ರ. ರಾಜಾ ದಿಲೀಪನು ಕ್ಷಾತ್ರಧರ್ಮ ಪಾಲಿಸುತ್ತ ಒಂದು ಹಸುವಿನ ಬದಲಿಗೆ ತನ್ನ ಶರೀರವನ್ನು ಸಿಂಹಕ್ಕೆ ಅರ್ಪಿಸಿದನು. ರಾಜಾ ಶಿಬಿಯು ಶರಣಾಗತರ ರಕ್ಷಣಾರೂಪಿ ಸ್ವಧರ್ಮ ಪಾಲನೆಗಾಗಿ ಒಂದು ಪಾರಿವಾಳದ ಬದಲಿಗೆ ತನ್ನ ಶರೀರದ ಮೌಂಸವನ್ನು ಗಿಡುಗಕ್ಕೆ ಕೊಟ್ಟನು. ಪ್ರಲ್ಹಾದನು ಭಗವದ್ಭಕ್ತಿರೂಪಿ ಸ್ವಧರ್ಮ ಪಾಲನೆಗಾಗಿ ಅನೇಕ ಪ್ರಕಾರದ ಸಾಧನೆಗಳನ್ನು ಮೃತ್ಯುವನ್ನು ಸಂತೋಷದಿಂದ ಸ್ವೀಕರಿಸಿದನು. ಸ್ವಧರ್ಮವನ್ನು ಪಾಲಿಸುವಲ್ಲಿ ಅನೇಕ ತೊಂದರೆಗಳುಂಟಾದರೆ ಧೈರ್ಯಗೆಡಬಾರದು. ಸತ್ಯವನ್ನು ನಂಬಿ ಸತ್ಯವನ್ನು ನುಡಿದು ಸತ್ಯಹರಿಶ್ಚಂದ್ರನಾದ.
ನ ಜಾತು ಕಾಮಾನ್ನ ಭಯಾನ್ನ ಲೋಭಾದ್ |
ಧರ್ಮಂ ತ್ಯಜೇಜ್ಜೀವಿತಸ್ಯಾಪಿ ಹೇತೋಃ ||
ನಿತ್ಯೋ ಧರ್ಮಃ ಸುಖ-ದುಃಖೇ ತ್ವನಿತ್ಯೇ |
ಜೀವೋ ನಿತ್ಯೋ ಹೇತುರಸ್ಯ ತ್ವನಿತ್ಯಃ ||
ಅಂದರೆ ಮನುಷ್ಯ ಯಾವುದೇ ಸಮಯದಲ್ಲಿ ಕಾಮ, ಲೋಭಗಳಿಂದ ಅಥವಾ ಪ್ರಾಣರಕ್ಷಣೆಗಾಗಿಯೂ ಸಹ ಧರ್ಮ ತ್ಯಾಗ ಮಾಡಬಾರದು. ಏಕೆಂದರೆ ಧರ್ಮವು ನಿತ್ಯವಾದದ್ದು ಮತ್ತು ಸುಖ-ದುಃಖಗಳು ಅನಿತ್ಯವಾದವುಗಳು. ಹಾಗೂ ಜೀವ ನಿತ್ಯ ಮತ್ತು ಜೀವನದ ಕಾರಣ ಅನಿತ್ಯವಾದದ್ದು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply