ಬೆಂಗಳೂರು- ಕನ್ನಡದ ಹೆಸರಾಂತ ನಟ ನಿರ್ದೇಶಕ ರಿಷಭ್ ಶೆಟ್ಟಿ ತೆಲಗು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ‘ಮಿಷನ್ ಇಂಪಾಸಿಬಲ್’ ಚಿತ್ರದಲ್ಲಿ ನಟಿಸುವ ಮೂಲಕ ತೆಲಗಿಗೆ ಹಾರಿದ್ದಾರೆ. ಮಿಷನ್ ಇಂಪಾಸಿಬಲ್ ಚಿತ್ರವನ್ನು ಸ್ವರೂಪ್ ಆರ್ ಜೆಎಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸುಹಾಸ್ ಮತ್ತು ಸಂದೀಪ್ ರಾಜ್ ಈ ಚಿತ್ರದಲ್ಲಿ ಪ್ರಮುಖರಾಗಿದ್ದಾರೆ. ರಿಷಭ್ ಶಟ್ಟೆ ಅವರ ಜೊತೆ ನಟಿಸುವುದಕ್ಕೆ ಸಂದೀಪ ರಾಜ್ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
‘ಮಿಷನ್ ಇಂಪಾಸಿಬಲ್’ ಚಿತ್ರದಲ್ಲಿ ರಿಷಭ್ ಶೆಟ್ಟಿ ಅತಿಥಿ ಪಾತ್ರವನ್ನು ನಿಭಾಯಿಸಲಿದ್ದಾರೆ. ಪಾತ್ರದ ಬಗ್ಗೆ ಹೆಚ್ಚೆನು ಮಾಹಿತಿ ತಿಳಿಸದ ಚಿತ್ರತಂಡ, ಆದರೆ ಈ ಪಾತ್ರದಿಂದ ಎಲ್ಲ ಅಭಿಮಾನಿಗಳಿಗೆ ಖುಷಿ ಕೊಡುವಂತಹ ಪಾತ್ರವಾಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಇನ್ನು ರಿಷಭ್ ಶೆಟ್ಟೆ ಅವರು ಕೂಡಾ ತಮ್ಮ ಪಾತ್ರದ ಬಗ್ಗೆ ಏನು ಹೇಳಿಕೊಂಡಿಲ್ಲ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇನ್ನು ರಿಷಭ್ ಶೆಟ್ಟಿ ಅವರ ಹೀರೊ ಸಿನಿಮಾ ಬಿಡುಗಡೆಗೆ ಫೆಬ್ರವರಿ 14 ಕ್ಕೆ ದಿನಾಂಕವನ್ನು ನಿಗದಿ ಮಾಡಲಾಗಿದೆ. ಇತ್ತೀಚೇಗಷ್ಟೆ ಬೆಲ್ ಬಾಟಂ 2 ಸಿನಿಮಾದ ಮೂಹೂರ್ತವನ್ನು ನೇರವೇರಿಸಿದ್ದಾರೆ. ಇನ್ನು ರಿಷಭ್ ಶೆಟ್ಟಿ ತೆಲಗಿನಲ್ಲಿ ಹೇಗೆ ಕಮಾಲ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.