ಗ್ರಾಮಸ್ಥರಿಂದ ಸ್ವಂತ ಹಣದಿಂದ ರಸ್ತೆ ರಿಪೇರಿ.

0

ರಾಯಚೂರು

ರಾಯಚೂರು ಜಿಲ್ಲೆಯ ಮುಂಗಾರು ಮಳೆ ಪರಿಣಾಮದಿಂದ ಕೆಲ ಗ್ರಾಮೀಣ ಪ್ರದೇಶಗಳ ರಸ್ತೆಗಳು ಹದ್ದಗೆಟ್ಟಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ.‌ ಇದರ ನಡುವೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣ ಹತ್ತಿರ ಬರುವ ಹೂನೂರು ಗ್ರಾಮ ಪಂಚಾಯತಿ ವ್ಯಾಪ್ತಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತೆರಳುವ ರಸ್ತೆ ಸ್ವಂತ ಹಣದಿಂದ ರಿಪೇರಿ ಮಾಡಿಕೊಂಡಿದ್ದಾರೆ.

ಮಳೆ ಸುರಿದ್ದರೆ ಗ್ರಾಮಕ್ಕೆ ಸಂಚಾರಿಸುವ ರಸ್ತೆ ಒಂದು ರೀತಿಯಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟು, ರಸ್ತೆಯಲ್ಲಿ ಓಡಾಡುವುದು ಹರಸಹಾಸ ಪಡಬೇಕಾಗುತ್ತದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ರಸ್ತೆ ದುರಸ್ತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

ಆದ್ರೆ ಮನವಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಗ್ರಾಮಸ್ಥರು ತಮ್ಮ ಗ್ರಾಮದ ಜನರಿಂದ ಹಣವನ್ನ ಸಂಗ್ರಹಿಸಿಕೊಂಡು ರಸ್ತೆಯನ್ನ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಮರಳಿ ಗ್ರಾಮದ ರೈತರಾದ ಕರಿಯಪ್ಪಗೌಡ, ಹನುಮಂತ, ಶರಣಬಸವ, ಬಸವರಾಜ, ಮುತ್ತಣ್ಣ, ಬಸವರಾಜ, ಬಸನಗೌಡ ಮಾಲಿ ಪಾಟೀಲ್, ಸಿದ್ದಪ್ಪ ಅಮರೇಶ, ದೊಡ್ಡಬಸಪ್ಪ ಸೇರಿದಂತೆ  ಗ್ರಾಮಸ್ಥರು ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply