ಹೈದ್ರಾಬಾದ್-  ದರ್ಶನ್ ಅಭಿಮಾನಿಗಳು ಕೂತುಹಲದಿಂದ ಎದುರು ನೋಡುತ್ತಿರುವ ರಾಬರ್ಟ್ ಸಿನಿಮಾ ಇದೇ ಮಾರ್ಚ್ 11 ರಂದು ತೆರೆಗೆ ಅಪ್ಪಳಿಸಲಿದೆ. ಇತ್ತೀಚೆಗೆ ನಡೆದ ರಾಬರ್ಟ್ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಕನ್ನಡ ಮತ್ತು ತೆಲಗುನಲ್ಲಿಯೂ ನಡೆಸಲಾಯಿತು. ಎರಡು ರಾಜ್ಯದಲ್ಲಿಯೂ ಫ್ರೀ ರಿಲೀಸ್ ಇವೆಂಟ್ ತುಂಬಾನೆ ಸದ್ದು ಮಾಡಿತು.

 

ರಾಬರ್ಟ್ ಸಿನಿಮಾದ ಹಾಡುಗಳಲ್ಲಿ ಒಂದಾಂದ ‘’ಕಣ್ಣು ಹೊಡಿಯಾಕ, ಮೊನ್ನೆ ಕಲತನಿ’’ ಎಂಬ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಹೊಂದಿದ್ದು, ಇದಕ್ಕೆ ಯೋಗರಾಜ್ ಭಟ್ ಅವರ ರಚನೆ ಇದ್ದು, ಅರ್ಜುನ್ ಜನ್ಯ ಅವರ ಸಂಗೀತ್ ಸಂಯೋಜನೆ ಇದಕ್ಕೆ ಇದೆ. ಮತ್ತು ಈ ಹಾಡು ಶ್ರಯಾ ಘೋಷಾಲ್ ಕಂಠ ಸಿರಿಯಲ್ಲಿ ಮೂಡಿ ಬಂದಿದೆ.  ರಾಬರ್ಟ್  ಫ್ರೀ ರಿಲೀಸ್ ಇವೆಂಟ್ ಲ್ಲಿ ಹಾಡುಗಳು ಕಮಾಲ್ ಮಾಡಿದವು.

 

 

ಕನ್ನಡದ ಈ ಹಾಡಿಗೆ ಠಕ್ಕರ ಕೊಡುವಂತೆ ತೆಲುಗಿನಲ್ಲಿ ಈ ಹಾಡು ಮೂಡಿ ಬಂದಿದೆ. ತೆಲುಗಿನಲ್ಲಿ ಮಂಗ್ಲಿ ಅವರ ಕಂಠದಲ್ಲಿ ಈ ಹಾಡು ಹುಚ್ಚೆಬ್ಬಿಸಿದೆ. ಕನ್ನಡದ ‘’ಕಣ್ಣು ಹೊಡಿಯಾಕ’’ ಹಾಡು ತೆಲಗಿನಲ್ಲಿ ‘’ಕಣ್ಣೆ ಅದಿರಿಂದಿ ಪೈಟೆ ಚದಿರಿಂದ’’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡನ್ನು ಮೊದಲು ರಿಲೀಸ್ ಮಾಡಿದಾಗಾ ಎಲ್ಲ ಅಭಿಮಾನಿಗಳು  ಕೇಳಿದ್ದರು, ಆದರೇ ಯಾವಾಗ ಈ ಹಾಡನ್ನು ಮಂಗ್ಲಿ ಅವರು ರಾಬರ್ಟ್ ತೆಲುಗಿನ ಫ್ರೀ ರಿಲೀಸ್ ಇವೆಂಟ್ ಸ್ಟೇಜ್ ಮೇಲೆ ಹಾಡಿದರೋ ಅಲ್ಲಿಂದ  ಈ ಹಾಡು ತೆಲಗಿನಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಫೇಮಸ್ ಆಯಿತು. ರಾತ್ರೋ ರಾತ್ರೋ ಮಂಗ್ಲಿ ಅವರು ಕರ್ನಾಟಕದಲ್ಲಿಯೂ ಅಭಿಮಾನಿಗಳನ್ನು ಹೊಂದಿದರು. ತೆಲಗಿನ ಈ ಹಾಡಿಗೂ ಅರ್ಜುನ್ ಜನ್ಯ ಅವರೇ ಸಂಗೀತ ನೀಡಿದ್ದಾರೆ.  ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮಲೋ ಸಿನಿಮಾದ ‘’ ರಾಮುಲೋ ರಾಮುಲಾ’’ ಹಾಡಿನ ರಚನೆಕಾರರಾದ ಕಾಸರ್ಲಾ ಶ್ಯಾಮ್ ಅವರೆ  ‘’ಕಣ್ಣೆ ಅದಿರಿಂದಿ ಪೈಟೆ ಚದಿರಿಂದ’’ ಹಾಡಿನ ರಚನೆ ಮಾಡಿದ್ದಾರೆ. ‘’ ರಾಮಲೋ ರಾಮಲೋ’’ ಹಾಡಿನಂತೆ ಈ ಹಾಡು ಕೂಡಾ ಹೆಚ್ಚು ಸದ್ದು ಮಾಡುತ್ತಿದೆ.

 

ಇನ್ನು ರಾಬರ್ಟ್ ಮಾರ್ಚ್ 11 ರಂದು ಎರಡು ರಾಜ್ಯದಲ್ಲಿ ಅಬ್ಬರಿಸಲು ರೆಡೆಯಾಗಿದ್ದಾನೆ.  ದರ್ಶನ್ ಅವರ ಎಲ್ಲ ಅಭಿಮಾನಿಗಳು ಈ ಸಿನಿಮಾದ ಗಳಿಗೆಯನ್ನು ಎದುರು ನೋಡುತ್ತಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply