ಮೈಸೂರು-ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವೇಶಕ್ಕೆ ಕೋವಿಡ್ ರಿಪೋರ್ಟ್ ಕಡ್ಡಾಯ ಎಂದು ಇಂದು ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ನಾಡಿದ್ದರು, ಆದ್ರೆ ಈಗ ಆ ಆದೇಶವನ್ನು ರಾಜ್ಯ ಸರ್ಕಾರ ರದ್ದು ಮಾಡುವ ಮೂಲಕ, ಕೋವಿಡ್‌-19 ಸಂಬಂಧ ಸರ್ಕಾರದ ಮುಖ್ಯಕಾರ್ಯದರ್ಶಿಯವರು ಮಾತ್ರ ಆದೇಶ ಹೊರಡಿಸಬೇಕು ಎಂದಿದ್ದಾರೆ. ಇನ್ನೂ ಕೋವಿಡ್ ಹಿನ್ನೆಲೆಯಲ್ಲಿ, ಯಾವುದೇ ಜಿಲ್ಲಾಡಳಿತ ಅಥವಾ ಸ್ಥಳಿಯ ಆಡಳಿತದಿಂದ ಪ್ರತ್ಯೇಕ ಆದೇಶ ಹೊರಡಿಸುವಂತಿಲ್ಲ. ಯಾವುದೇ ರೀತಿಯ ಸಲಹೆ ಸೂಚನೆಗಳನ್ನು ಸಹ ನೀಡುವಂತಿಲ್ಲ.

ಅಲ್ಲದೆ ಅಂತಹ ಪ್ರಸ್ತಾವನೆ ಇದ್ದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚಿಸಬೇಕು. ಯಾವುದೇ ಜಿಲ್ಲಾಡಳಿತ ಪ್ರತ್ಯೇಕ ಆದೇಶ ನೀಡಿದರೆ ಅದು ಸಿಎಂ ನಿರ್ದೇಶನದ ಉಲ್ಲಂಘನೆ ಆಗಲಿದೆ. ಹೀಗಾಗಿ ಯಾವುದೇ ಜಿಲ್ಲಾಡಳಿತ ಪ್ರತ್ಯೇಕ ಆದೇಶ ಹೊರಡಿಸಿದ್ದರೆ ಅದನ್ನ ವಾಪಸ್‌ ಪಡೆಯತಕ್ಕದ್ದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಅವರು  ಸುತ್ತೋಲೆ ಬಿಡುಗಡೆ ಮಾಡಿದ್ದಾರೆ. ಸುತ್ತೋಲೆ ಬಿಡುಗಡೆ ಮೂಲಕ ಮೈಸೂರು ಜಿಲ್ಲಾಡಳಿತ ಪ್ರತ್ಯೇಕ ಆದೇಶ ರದ್ದು ಮಾಡಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply