ಬೆಂಗಳೂರು- ಕನ್ನಡದ ಹೆಸರಾಂತ ವಾಹಿನಿ ಝೀ ಕನ್ನಡದ ಎಲ್ಲರ ಮನೆಮಾತಾಗಿರುವ ಗಟ್ಟಿಮೇಳೆ ಧಾರಾವಾಹಿ ನಾಯಕ ನಟಿ ರೌಡಿ ಬೇಬಿ ಅಲಿಯಾಸ್ ಅಮೂಲ್ಯ ಈಗ ಕನ್ನಡದ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ‘ರೌಡಿ ಬೇಬಿ’ ಅಮೂಲ್ಯ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿ ಬೆಳೆದ ನಿಶಾ ಇದೀಗ ನಟ ವಿನಯ್ ರಾಜ್ಕುಮಾರ್ ನಾಯಕನಾಗಿ ನಟಿಸುತ್ತಿರುವ ‘ಅಂದೊಂದಿತ್ತು ಕಾಲ’ದಲ್ಲಿ ನಾಯಕಿಯಾಗಿ ಸಿನಿ ಬದುಕಿನ ತಮ್ಮ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ನಟ ಪುನೀತ್ ರಾಜ್ಕುಮಾರ್ ಇತ್ತೀಚೆಗೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಒಂದು ಒಳ್ಳೆಯ ಅವಕಾಶಕ್ಕೆ ಕಾಯುತ್ತಿದ್ದ ನಟಿ ನಿಶಾಗೆ ಬಂಪರ್ ಆಫರ್ ಬಂದಿದೆ. ಈ ಹಿಂದೆಯೇ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದ್ದರೂ ಅದು ಯಾಕೋ ಚಿತ್ರರಂಗದಿಂದ ದೂರ ಉಳಿದಿದ್ದರು. ಆದ್ರೆ ಈಗ ವಿನಯ್ ರಾಜ್ಕುಮಾರ್ ಅವರ ಜೊತೆಗೆ ನಟಿಸುವ ಅವಕಾಶ ದೊರೆತಿರುವುದು ಸಂತೋಷದ ವಿಷಯ’ ಎನ್ನುತ್ತಾರೆ.