ಕಲಬುರಗಿ- ಕಲಬುರಗಿ  ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ   “ಇಟ್ ರೈಟ್ ಇಂಡಿಯಾ ಕಲಬುರಗಿ” ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಮಂಗಳವಾರ ಚಾಲನೆ ನೀಡಿದರು. ನಂತರ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಮಾತನಾಡಿ, ಗ್ರಾಹಕರಿಗೆ ಸುರಕ್ಷಿತವಾದ ಆಹಾರವನ್ನು ತಲುಪಿಸಲು ಆಹಾರ ತಯಾರಕರು ಮತ್ತು ಮಾರಾಟಗಾರರಲ್ಲಿ ಅರಿವು ಮೂಡಿಸಬೇಕು. ಇಟ್ ರೈಟ್ ಇಂಡಿಯಾ ಕಲಬುರಗಿ ಕಾರ್ಯಕ್ರಮದ ವ್ಯಾಪಕ ಪ್ರಚಾರ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ. ಶಿವಶರಣಪ್ಪಾ ಎಂ.ಡಿ ಭೂಸನೂರ ಅವರು ಈ ಕಾರ್ಯಕ್ರಮದ ಗುರಿ ಮತ್ತು ಉದ್ದೇಶ ಕುರಿತು ಮಾಹಿತಿ ನೀಡಿದರು. ಸುರಕ್ಷಿತ ಆಹಾರ, ಆರೋಗ್ಯಕರ ಆಹಾರ ಹಾಗೂ ಸುಸ್ಥಿರ ಆಹಾರದ ಕುರಿತು ಮಾಹಿತಿ ನೀಡಿದರು.

Leave A Reply