ಬೆಂಗಳೂರು- ಕನ್ನಡ ಎಲ್ಲ ಹಿರೋಗಳೊಂದಿಗೆ ನಟಿಸಿ ಸೈ ಎನಿಸಿಕೊಂಡ ನಟಿ ರಚಿತಾ ರಾಮ್ ಇದೀಗ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕೃಷ್ಣ ,ನಟ ಅಜಯ್ ರಾವ್ ಅವರೊಂದಿಗೆ ನಟಿಸಲು ರೆಡಿಯಾಗಿದ್ದಾರೆ. ಇವರಿಬ್ಬ ಚಿತ್ರಕ್ಕೆ ‘ಲವ್ ಯೂ ರಚ್ಚು’ ಎಂದು ಹೆಸರಿಡಲಾಗಿದೆ.
ಶಂಕರ್ ರಾಜ್ ಎಂಬುವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಗುರು ದೇಶಪಾಂಡೆ ಅವರು ಲವ್ ಯೂ ರಚ್ಚು ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಇನ್ನು ಚಿತ್ರೀಕರಣ ಆರಂಭವಾಗಿಲ್ಲ, ಚಿತ್ರತಂಡ ಅತೀ ಶೀಘ್ರದಲ್ಲಿ ಚಿತ್ರೀಕರಣ ಆರಂಭಿಸಲಿದೆ. ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಚಿತಾ ರಾಮ್, ಪ್ರೇಮ ಅವರ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇನ್ನು ಅನೇಕ ಕನ್ನಡ ಸಿನಿಮಾಗಳು ಅವರ ಕೈಯಲ್ಲಿವೆ.