ಬೆಂಗಳೂರು- ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಸಂಜನಾ ಅವರು ಈಗ ಸಾಮಾಜಿಕ ಜಾಲತಾಣದ ಕಡೆ ಮುಖ ಮಾಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಸಂಜನಾ 90 ದಿನಗಳ ಕಾಲ ಜೈಲು ಊಟ ಮಾಡಿ ಹೈಕೋರ್ಟ್ ನಿಂದ ಜಮೀನಿ ಪಡೆದ ಬಳಿಕ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿಲ್ಲಾ . ಅಲ್ಲದೇ ತಮ್ಮ ಸಮಾಜಿಕ ಜಾಲತಾಣದಿಂದ ಸಹ ದೂರ ಉಳಿದಿದ್ದರು. ಆದ್ರೆ ಈಗ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಜೈಲಿನಿಂದ ಬಿಡುಗಡೆ ಹೊಂದಿದ ಮೇಲೆ ವಿಶ್ರಾಂತಿ ಪಡೆಯುತ್ತಾ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುತ್ತಿರುವ ನಟಿ ಸಂಜನಾ ಗಲ್ರಾನಿ, ಇದೀಗ ತಮ್ಮ ಸಹೋದರಿ ನಿಕ್ಕಿ ಗಲ್ರಾನಿ ಜನ್ಮದಿನದ ಮೊದಲೇ ಸೋಶಿಯಲ್ ಮೀಡಿಯಾಗಳಿಗೆ ರೀ ಎಂಟ್ರಿ ನೀಡಿದ್ದಾರೆ.‌ ಸಂಜನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟಗಳನ್ನು ಹಂಚಿಕೊಂಡಿದ್ದಾರೆ.

About Author

Priya Bot

Leave A Reply