ನವದೆಹಲಿ- ಕೇಂದ್ರ ಚುನಾವಣಾ ಆಯೋಗ ಇಂದು ಸುದ್ದಿ ಗೋಷ್ಠಿ ನಡೆಸಿ ಕೇರಳ ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾಗೆ ದಿನಾಂಕ ನಿಗದಿ ಮಾಡಿದ್ದು, ಜೊತೆಯಲ್ಲಿ ರಾಜ್ಯದ ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ. ದೆಹಲಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅಗರವಾಲ್ ಅವರು ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ  ನಾಮ ಪತ್ರ ಸಲ್ಲಿಸಲು ಕಡೆಯ ದಿನಾಂಕ ವಾಗಿದ್ದು, ನಾಮ ಪತ್ರ ಹಿಂಪಡೆಯಲು ದಿನಾಂಕ ನಿಗದಿ ಮಾಡಲಾಗಿದೆ. ಇನ್ನು ಮತದಾನವನ್ನು ದನಾಂಕದಂದು ನಿಗದಿ ಮಾಡಲಾಗಿದೆ. ಇನ್ನು ಆಸಾಂ ನಲ್ಲಿ ಒಟ್ಟು ಮೂರು ಹಂತದಲ್ಲಿ ಮತದಾನಕ್ಕೆ ಮಾರ್ಚ್ 27 ಮೊದಲ ಹಂತ ಎರಡನೇ ಏಪ್ರಿ ರಂದು ಎರಡನೇ ಹಂತದ ಮತದಾನ ಏಪ್ರಿಲ್ 6 ಕ್ಕೆ ಮೂರನೇ ಹಂತದ ಮತದಾನ ನಡೆಯಲಿದೆ. ಇನ್ನು ತಮಿಳುನಾಡು ಹಾಗೂ ಕೇರಳ ಹಾಗೂ ಪುದುಚೇರಿಯಲ್ಲಿ   ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 6 ರಂದು ನಡೆಯಲಿದೆ. ಇನ್ನು  ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 27 ಏಪ್ರಿಲ್ 1 ಏಪ್ರಿಲ್ 6 ಏಪ್ರಿಲ್ 8 ಏಪ್ರಿಲ್-17 ಏಪ್ರಿಲ್- 22 ಏಪ್ರಿಲ್ – 26 ಏಪ್ರಿಲ್ -29 ರಂದು ನಡೆಯಲಿದೆ. ಇನ್ನು ರಾಜ್ಯದ ಉಪ ಚುನಾವಣೆಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು

ಇನ್ನು ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಮತದಾನ ಕೇಂದ್ರಗಳನ್ನು ತೆರೆಯಲಾಗಿದ್ದು, ಚುನಾವಣಾ ಪ್ರಕ್ರೀಯೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ. ಅಲ್ಲದೇ ಚುನಾವಣೆಯಲ್ಲಿ ಭಾಗೊಯಾಗುವ ಪ್ರತಿ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದಿದ್ದಾರೆ. ಕಳೆದ ವರ್ಷ ಬಹಿರಾ ಚುನಾವಣೆ ನಮಗೆ ಹೆಚ್ಚು ಸವಾಲಾಗಿತ್ತು, ಹಂತ ಸವಾಲಿನ ಸಮಯದಲ್ಲಿಯೇ ಚುನಾವಣೆ ಮಾಡಿದ್ದೆವೆ, ಹೀಗಾಗಿ ಆಯೋಗದ ಕಲೆಸಕ್ಕೆ ನಮಗೆ ಮೆಚ್ಚುಗೆ ಇದೆ ಎಂದಿದ್ದಾರೆ. ಇನ್ನು ಕೋವಿಡ್ ಎರಡನೇ ಅಲೆ ಇರುವ ಹಿನ್ನೆಲೆಯಲ್ಲಿ ಮನೆ ಮನೆ ಪ್ರಚಾರಕ್ಕೆ ಕೇವಲ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗುವುದು, ಇನ್ನು ರಾಜಕಾರಣಿಗಳು ರೋಡ್ ಶೋ ಗೆ ಐದು ವಾಹನಗಳಿಗೆ ಅವಕಾಶ ನೀಡಲಾಗಿದೆ‌

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply