ಚೆಡ್ಡಿ ಹರಿದಿದೆ, ಲಾಕ್ ಡೌನ್ ತೆರೆವು ಮಾಡಿ ಸಿ ಎಮ್ ಗೆ ಪತ್ರ…!?

0

ಮೈಸೂರು -ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆಂದು ಲಾಕ್ ಡೌನ್ ಹೇರಿಲಾಗಿದೆ. ಇದ್ರಿಂದ ಸಮಾಜದ ಹಲವು ವರ್ಗದ ಜನರು ನಾನಾ ಸಮಸ್ಯೆ, ಎದುರಿಸುತ್ತಿದ್ದಾರೆ. ಕೆಲವರು ಹಾಸ್ಯ ಮಾಡು ವಿಡಿಯೋ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟಿದ್ದಾರೆ. ಇನ್ನು ಕೆಲವರು ತಮ್ಮ ಪೇಸ್ ಬುಕ್ ಗಳಲ್ಲಿ ವಿಭಿನ್ನವಾದ ಪೋಸ್ಟ್ ಗಳನ್ನಾ ಹಾಕಿದ್ದಾರೆ. ಆದ್ರೆ ಇಲ್ಲೊಬ್ಬರು ಒಂದು ಹೆಚ್ಚೆ ಮುಂದೆ ಹೋಗಿ ರಾಜ್ಯದ ಸಿ ಎಮ್ ಗೆ ಪತ್ರ ಬರೆದಿದ್ದಾರೆ. ನನ್ನ ಚೆಡ್ಡಿ ಹರಿದಿದೆ‌ , ದಯಮಾಡಿ ಲಾಕ್ ಡೌನ್ ತೆರವು ಮಾಡಿ ಎಂದು ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ವ್ಯಕಿಯೋರ್ವ ಹಾಸ್ಯಾಸ್ಪದ ರೀತಿಯಲ್ಲಿ ಸಿಎಂಗೆ ಪತ್ರ ಬರೆದಿದ್ದಾರೆ. ಚೆಡ್ಡಿ ಹರಿದಿದೆ ಲಾಕ್‌ ಡೌನ್‌ ತೆರವುಗೊಳಿಸಿ ಹೊಸ ಚೆಡ್ಡಿ ಖರೀದಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

ಮೈಸೂರಿನ ಚಾಮರಾಜಪುರಂ ನಿವಾಸಿ , ನ್ಯಾಯಾಂಗ ಇಲಾಖೆ ನಿವೃತ್ತ ಅಧಿಕಾರಿ ಕೆ.ಸು.ನರಸಿಂಹ ಮೂರ್ತಿ ನರಸಿಂಹ ಮೂರ್ತಿ ಎಂಬವರು ತನ್ನ ಚೆಡ್ಡಿ ಹರಿದಿದ್ದು ಬಟ್ಟೆ ಅಂಗಡಿಯನ್ನು ದಯಮಾಡಿ  ತೆರೆಸಿ ಎಂದು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ . ಇನ್ನು  ನನ್ನ ಬಳಿ ಎರಡೇ ಜೊತೆ ಒಳ ಉಡುಪುಗಳಿದ್ದು , ಅವುಗಳು ಹರಿದಿವೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತರಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ , ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸೀತು . ಆದರೆ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ . ಲಾಕ್ ಡೌನ್ ಮುಂದುವರೆಸುವ ಮುನ್ನ ಒಂದು ಸಾರಿ ಯೋಚನೆ ಮಾಡಿ ಎಂದು ಮನವಿ ಮಾಡಿದ್ದಾರೆ.

 

ಕೆ.ಸು.ನರಸಿಂಹ ಮೂರ್ತಿ,

ಚಾಮರಾಜಪುರಂ, ಮೈಸೂರು

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply