ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ದ್ವಿತೀಯ ಪಿಯು ಪರೀಕ್ಷೆಗಳನ್ನು ಆನ್ಲೈನ್‌ನಲ್ಲಿ ನಡೆಸಲು ಹೊರಟಿರುವ
ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು AIDSO ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ! ಹಲವು ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಕೇವಲ ಶೇ. 26ರಷ್ಟು ವಿದ್ಯಾರ್ಥಿಗಳು ಮಾತ್ರ ಆನ್ಲೈನ್ ತರಗತಿಯಲ್ಲಿ ಭಾಗವಹಿಸಿದ್ದಾರೆ. ಒಂದೆಡೆ ಹಳ್ಳಿಗಳಲ್ಲಿ ತಾಂತ್ರಿಕ ಸಮಸ್ಯೆಯಾದರೆ, ಮತ್ತೊಂದೆಡೆ ಬಹುಪಾಲು ಗ್ರಾಮೀಣ ಭಾಗದ ಮತ್ತು ಬಡ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಬೇಕಾದ ಸೌಲಭವಿಲ್ಲ. ಪಿಯು ವಿದ್ಯಾರ್ಥಿಗಳ ಪೈಕಿ ಕೇವಲ ಶೇಕಡ 20ರಷ್ಟು ವಿದ್ಯಾರ್ಥಿಗಳು ಮಾತ್ರ ಆನ್ಲೈನ್ ತರಗತಿಗಳಲ್ಲಿ ಹಾಜರಾಗಿದ್ದ ಕಾರಣ ಸರ್ಕಾರ ಕಡೆಗೆ ದೂರದರ್ಶನ, ಚಂದನದ ಮೂಲಕ ತರಗತಿ ನಡೆಸಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆನ್ಲೈನ್ ಪರೀಕ್ಷೆ ನಡೆಸಲು ಪ್ರಸ್ತಾವ ಇರಿಸುವುದು ರಾಜ್ಯದ ಬಹುಪಾಲು, ಅದರಲ್ಲೂ ಬಡ ಮತ್ತು ಗ್ರಾಮೀಣ ಕುಟುಂಬಗಳ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯ ಎಸಗುವಂತೆ ಮಾಡಿದೆ. ಈಗಾಗಲೇ ಬಡ ವಿದ್ಯಾರ್ಥಿಗಳು ಲಾಕ್ ಡೌನ್ ಪ್ರಹಾರದಿಂದ ಮತ್ತು ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿನ ಅಸಮಾನತೆಯ ಪರಿಣಾಮ ಉನ್ನತ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಹಾಗಿದ್ದಾಗ ಅವರ ಮೇಲಿನ ಈ ಪ್ರಹಾರ ಶಿಕ್ಷಣ ವಿರೋಧಿಯಾಗಿದೆ.

ಕೋವಿಡ್ ಸಂದರ್ಭದಲ್ಲೂ ಪರೀಕ್ಷೆ ನಡೆಸುವುದು ನಿಜವಾಗಲೂ ಸವಾಲಿನ ವಿಷಯ, ಆದ್ದರಿಂದ ಶಿಕ್ಷಕರು,
ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರ ತನ್ನ ನಡೆಯನ್ನು ನಿರ್ಧರಿಸಬೇಕು. ಈ ಹಿನ್ನಲೆಯಲ್ಲಿ, ಈ ನಡೆಯನ್ನು ವಿರೋಧಿಸುತ್ತಲೇ AIDSO ರಾಜ್ಯ ಸಮಿತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಆನ್ಲೈನ್ ಪರೀಕ್ಷೆ ಮತ್ತು ಸೌಲಭ್ಯದ ಕುರಿತು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು AIDSO ಕರ್ನಾಟಕ ಫೇಸ್ಬುಕ್ ಪೇಜ್ ಸಂಪರ್ಕಿಸಬೇಕು, ಸ್ಮಾಟ್ಫೋನ್ ಇಲ್ಲದ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಕಾರ್ಯಕರ್ತರನ್ನು ಸಂಪರ್ಕಿಸಿ ಈ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿ, ತಜ್ಞರ ಅಭಿಪ್ರಾಯ ಮೇರೆಗೆ ಪರೀಕ್ಷೆ ನಡೆಸಲು ಸಲಹೆಗಳನ್ನು ಸಹ ರಾಜ್ಯ ಸರ್ಕಾರಕ್ಕೆ AIDSO ನೀಡಲು ನಿರ್ಧರಿಸಿದೆ.

ಈ ಕೂಡಲೇ ಆನ್ಲೈನ್ ಪರೀಕ್ಷೆ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು AIDSO ಒತ್ತಾಯಿಸುತ್ತದೆ ಎಂದು ಗುರಳ್ಳಿ ರಾಜ ಜಿಲ್ಲಾ ಅಧ್ಯಕ್ಷರು, ರವಿಕಿರಣ್.ಜೆ.ಪಿ
ಜಿಲ್ಲಾ ಕಾರ್ಯದರ್ಶಿ, AIDSOಯಿಂದ ತಿಳಿಸಿದರು.

images-2.jpeg

Email

KC Eranna

About Author

KC Eranna

Leave A Reply