ಪರೀಕ್ಷಾ ಕೇಂದ್ರದ ಸುತ್ತಲು ಕಲಂ 144 ಜಾರಿ

0

ರಾಯಚೂರು

ಕೋವಿಡ್ ಭೀತಿ ನಡುವೆ ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ರಾಯಚೂರು ಜಿಲ್ಲೆಯಾದ್ಯಂತ ಶಿಕ್ಷಣ ಸಕಲ ಸಿದ್ದತೆ ಮಾಡಿಕೊಂಡಿದೆ. ನೂತನ ಮಾದರಿಯ ಇಂದು ಪರೀಕ್ಷೆ ನಡೆಯಲಿದ್ದು,  ಪರೀಕ್ಷಾ ಕೇಂದ್ರದ ಸುತ್ತಲು 144 ನಿಷೇಧ್ಞಾನೆ‌ ಕಾಯಿದೆ ಜಾರಿ ಮಾಡಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 179 ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ.

ದೇವದುರ್ಗ ತಾಲೂಕಿನಲ್ಲಿ 26, ಲಿಂಗಸೂಗೂರು 27, ಮಾನವಿ 31, ರಾಯಚೂರು 30, ಸಿಂಧನೂರು 35 ಕೇಂದ್ರಗಳಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಿಕೊಂಡಿದ್ದು, 30,503 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಣಿ ಮಾಡಿಕೊಂಡಿದ್ದಾರೆ. 16,786 ಗಂಡು ಮಕ್ಕಳು, 13,717 ಹೆಣ್ಣು ಮಕ್ಕಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಕೋವಿಡ್-19 ನಿಯಮದಂತೆ ಪ್ರತಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಆರೋಗ್ಯ ತಪಾಸಣೆ ‌ಮಾಡಿ ಪರೀಕ್ಷಾ ಕೇಂದ್ರಕ್ಕೆ ಬೀಡಲಾಗುತ್ತಿದೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಮಕ್ಕಳಿಗಾಗಿ ವಿಶೇಷ ಕೋಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಕೊಠಡಿಯಲ್ಲಿ 12 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಜಿಗ್ ಜ್ಯಾಗ್ ಮಾದರಿಯಲ್ಲಿ ಕೋಣೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವರ್ಷ ವಿಷಯವಾರು ಪರೀಕ್ಷೆ ನಡೆಸಲಾಗುತ್ತಿತ್ತು. ಆದ್ರೆ ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಎರಡು ದಿನಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ‌ಮುಕ್ತಾವಾಗಲಿದೆ. ಒಂದು ದಿನಕ್ಕೆ ಮೂರು ವಿಷಯಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 120 ಅಂಕಗಳಿಗೆ 3 ಗಂಟೆಗಳ ಕಾಲ ಸಮಯ ನಿಗದಿಯಾಗಿದ್ದು, ಒಂದು ವಿಷಯಕ್ಕೆ 40 ಅಂಕಗಳು ನಿಗದಿಯಾಗಿದೆ. ಪಿಂಕ್‌, ಆರೇಂಜ್ ‌, ಗ್ರೀನ್ ಮೂರು ‌ಬಣ್ಣದಲ್ಲಿ ಓಎಂ‌ಆರ್ ಶೀಟ್. ಪಿಂಕ್ ಬಣ್ಣದಲ್ಲಿ ಇರಲಿದೆ ಗಣಿತ ವಿಷಯ, ಆರೇಂಜ್ ಬಣ್ಣದಲ್ಲಿ ಇರಲಿದೆ ವಿಜ್ಞಾನ, ಗ್ರೀನ್‌ ಸಮಾಜ ವಿಜ್ಞಾನ  ಓಎಂಆರ್ ಇರಲಿದೆ. 

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply