ತೂಲಹಳ್ಳಿ ಗ್ರಾಮದಲ್ಲಿ 60 ಲಕ್ಷ ವೆಚ್ಚದಲ್ಲಿ ಬೀಜ ಸಂಸ್ಕರಣಾ ಘಟಕ ನಿರ್ಮಾಣ

0

ಬಳ್ಳಾರಿ ಜಿಲ್ಲೆ ಕೊಟ್ಟೂರು: ಕೃಷಿ ಇಲಾಖೆಯು ವರ್ಷವಿಡು ರೈತಪರ ಕಾಳಜಿಯುಳ್ಳ ಇಲಾಖೆಯಾಗಿದೆ ರೈತರಿಗೆ ಕೃಷಿಗೆ ಮೂಲಭೂತವಾಗಿ ಅವಶ್ಯಕತೆ ಇರುವ ಎಲ್ಲಾ ಸಾಮಾಗ್ರಿಗಳನ್ನು ಸಮರ್ಪಕವಾಗಿ ಪೂರೈಸಿದೆ ಎಂದು ಕೃಷಿ ಇಲಾಖೆಯ ಬಳ್ಳಾರಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಹೇಳಿದರು.

ಶುಕ್ರವಾರ ತಾಲೂಕಿನ ತೂಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೀಜ ಸಂಸ್ಕರಣ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸ್ಥಳೀಯ ಗ್ರಾಮೀಣ ಮಟ್ಟದಲ್ಲಿ ಬಿತ್ತನೆ ಬೀಜಗಳನ್ನು ಸಂಸ್ಕರಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದ ಬೀಜಗ್ರಾಮ ಯೋಜನೆಯಡಿ ಕರ್ನಾಟಕ ರಾಜ್ಯ ಬೀಜ ನಿಗಮ ಬೆಂಗಳೂರು ಇವರ ಅನುದಾನದಲ್ಲಿ 60 ಲಕ್ಷ ರೂ ವೆಚ್ಚದಲ್ಲಿ ಈ ಘಟಕದ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ ನಂತರದ ದಿನಮಾನದಲ್ಲಿ ಇದರ ಸದುಪಯೋಗವನ್ನು ತಾಲೂಕಿನ ಎಲ್ಲ ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಉದ್ದೇಶಕ್ಕಾಗಿಯೇ ತೂಲಹಳ್ಳಿಯ ನಮ್ಮ ಇಲಾಖೆ ಸಹಕಾರ ಸಂಘದ ಮಳಿಗೆಯಲ್ಲಿ ಒಂದು ತಿಂಗಳ ಹಿಂದೆಯೇ ಸರ್ಕಾರದ ರಿಯಾಯಿತಿ ಧರದಲ್ಲಿ ಬೀಗಳ ವಿತರಣೆಗಾಗಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರವನ್ನು ಆರಂಭಿದೆ ಎಂದು ಹೇಳಿದರು.

ನಂತರ ಇಫ್ಕೋ ಸಂಸ್ಥೆಯ ಹೊಸಪೇಟೆಯ ಕ್ಷೇತ್ರಾಧಿಕಾರಿಗಳಾದ ಸಿದ್ದಾರೂಢ ಪಾಟೀಲ್ ಮಾತನಾಡಿ ದೇಶದಲ್ಲಿ ಪ್ರಪ್ರಥಮವಾಗಿ ನ್ಯಾನೋ ಯೂರಿಯಾವನ್ನು ಇಫ್ಕೋ ಸಂಸ್ಥೆಯು ಸಂಶೋಧನೆ ಮಾಡಿ ಬಿಡುಗಡೆಗೊಳಿಸಿದೆ ಇದರಿಂದ ರೈತರಿಗೆ ಹೆಚ್ಚಿನ ಇಳುವರಿ ಹಾಗೂ ಕಡಿಮೆ ಖರ್ಚಿನಲ್ಲಿ ಆದಾಯ ದ್ವಿಗುಣಗೊಳಿಸುತ್ತದೆ. ನ್ಯಾನೋ ಯೂರಿಯಾವು ಭೂಮಿಯ ಫಲವತ್ತತೆಯನ್ನು ಸಂರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ರೈತರಿಗೆ ಸಂಪೂರ್ಣ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಕರ್ನಾಟಕ ಬೀಜ ನಿಗಮದ ನಿರ್ದೇಶಕರಾದ ಎಸ್ ರಾಜೇಂದ್ರಪ್ರಸಾದ್ ರೈತರಿಗೆ ಉತ್ತಮ ಗುಣಮಟ್ಟದ ಭಿತ್ತನೆ ಬೀಜಗಳನ್ನು ರೈತರಿಂದಲೇ ಬೆಳೆಸಿ ಸಂಸ್ಕರಣಾ ಮಾಡಿ ವಿತರಣೆ ಮಾಡುವ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ಬೀಜ ಸಂಸ್ಕರಣಾ ಘಟಕಗಳ ಸ್ಥಾಪನೆಯನ್ನು ಬೀಜ ನಿಗಮವು ಬೀಜ ಸಂಸ್ಕರಣಾ ಘಟಕಗಳನ್ನು ರಾಜ್ಯದ ವಿವಿಧೆಡೆ ಆರಂಬಿಸಿದೆ,ತೂಲಹಳ್ಳಿಯಲ್ಲಿ ಈ ಘಟಕವನ್ನು ಆರಂಭಿಸಲು ಅನುಮೋದಿಸಿದ ನಿಗಮದ ಎಲ್ಲಾ ಅಧಿಕಾರ ವರ್ಗದವರಿಗೆ ನಾವು ಆಭಾರಿಯಾಗಿದ್ದೆವೆ ಆದಷ್ಟು ಶ್ರೀಘ್ರ ಸಂಸ್ಕರಣಾ ಘಟಕ ನಿರ್ಮಾಣವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಾದ ವಾಮದೇವ ಕೊಳ್ಳಿ, ಸಹಕಾರ ಸಂಘದ ಅಧ್ಯಕ್ಷರಾದ ಎಂ ವೀರೇಶ್, ಉಪಾಧ್ಯಕ್ಷಾದ ಶಿಲ್ಪ ಮಂಜುನಾಥ್, ನಿರ್ದೇಶಕರುಗಳಾದ ಮರುಳಸಿದ್ದಪ್ಪ ಯು, ಶಿವಕುಮಾರಯ್ಯು, ಡಿ.ರುದ್ರಗೌಡ, ಸುನೀಲ ಎಂ ಎಸ್, .ಶಾಂತಮ್ಮ ಅಮಲಾಪುರ, .ಸಿದ್ದೇಶ್ ಯು,.ಚಂದ್ರಪ್ಪ ಹೆಚ್, ಅಂಜಿನಪ್ಪ ಕೆ, ಉಪಸ್ಥಿತರಿದ್ದರು ಹಾಗೂ ತಾಲೂಕಿನ ಕೃಷಿ ಉಪಕರಣಗಳ ಮಾರಾಟಗಾರರು,ಸುತ್ತಮುತ್ತಲಿನ ಗ್ರಾಮಗಳ ರೈತರು ಸಹ ಪಾಲ್ಗೊಂಡಿದ್ದರು.

ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಪ್ರದೀಪ್ ಎಂ ಕಾರ್ಯಕ್ರಮವನ್ನು ನಿರೂಪಿಸಿದರು.

IMG-20210702-WA0014.jpg

Email

Huligesha tegginakeri

About Author

Huligesha Tegginakeri

Leave A Reply