ಬಳ್ಳಾರಿ- ಬಳ್ಳಾರಿ ತಾಲೂಕಿನ ಮೋಕಾ ಗ್ರಾಮ ಪಂಚಾಯತಿಯ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಡಿ.ರಾಮಪ್ಪ ಮತ್ತು ದೇವಿಂದ್ರಪ್ಪ ಎನ್ನುವವರು ಸಮಾನ ಮತ ಅಂದರೇ ತಲಾ 357 ಮತಗಳು ಪಡೆದ ಹಿನ್ನೆಲೆ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಲಾಟರಿ ಎತ್ತುವುದರ ಮೂಲಕ ರಿಟರ್ನಿಂಗ್ ಅಧಿಕಾರಿಗಳು ವಿಜೇತರನ್ನು ಘೋಷಿಸಿದರು.

ಡಿ.ರಾಮಪ್ಪ ಅವರನ್ನು ವಿಜೇತರೆಂದು ಘೋಷಿಸಲಾಯಿತು. ವಿಜೇತರಾಗುತ್ತಲೇ ಡಿ.ರಾಮಪ್ಪ ಅವರು ಖುಷಿಯಿಂದ ಕೈಮುಗಿದರು. ದೇವಿಂದ್ರಪ್ಪನವರಿಗೆ ಕೈಕುಲುಕಿದರು. ಇದೇ ರೀತಿ ಚೆಳ್ಳಗುರ್ಕಿ ಗ್ರಾಪಂ ವ್ಯಾಪ್ತಿಯ ಯಾಳ್ಪಿ ಗ್ರಾಮದಲ್ಲಿ ನಾಗರಾಜ(319) ಮತ್ತು ಮನೋಹರ್(318+1) ಅವರು ಸಮಾನ ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಲಾಟರಿ‌ ಮೂಲಕ ಆಯ್ಕೆ ಮಾಡಲು ರಿಟರ್ನಿಂಗ್ ಅಧಿಕಾರಿಗಳು ಮುಂದಾದರು. ಇದಕ್ಕೆ ಅಭ್ಯರ್ಥಿಗಳು ಆಕ್ಷೇಪಿಸಿ ಮರು ಎಣಿಕೆಗೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಮರು ಎಣಿಕೆ ನಡೆಯುತ್ತಿದೆ

Leave A Reply