ಕುರಿ ಕಳ್ಳರನ್ನು ಹಿಡಿಯಲು ಹೋದ, ಪೊಲೀಸರ ಮೇಲೆ ಹಲ್ಲೆ.

0

ರಾಯಚೂರು.

ಕುರಿ ಕಳ್ಳರನ್ನು ಹಿಡಿಯಲು ಹೋದ, ರಾಯಚೂರು ಜಿಲ್ಲೆಯ ಇಡಪನೂರು ಪೊಲೀಸರ ಮೇಲೆ, ಆಂಧ್ರದ ಎಮ್ಮೆಗನೂರು ಜಿಲ್ಲೆಯ ಕಡಿವೆಲ್ಲಾ ಗ್ರಾಮದ ಯುವಕರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಹಲ್ಲೆಯಿಂದಾಗಿ ಕಾನ್ ಸ್ಟೇಬಲ್ ಹನುಮಂತ್ರರಾವ್  ಗಾಯಗೊಂಡಿದ್ದಾರೆ. ರಾಯಚೂರು ತಾಲೂಕಿನ  ಇಡಪನೂರು ಪೊಲೀಸ್ ಠಾಣೆಯ ನಾಲ್ವರು ಪೊಲೀಸರು ಕುರಿ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಲು ಇತ್ತೀಚೆಗೆ ಕಡಿವೆಲ್ಲಾ ಗ್ರಾಮಕ್ಕೆ ತೆರಳಿದ್ದರು. ಆ ಸಮಯದಲ್ಲಿ ಗ್ರಾಮದ ಕೆಲವು ಯುವಕರು ಕೋಲಾಟ ಆಡುತ್ತಿದ್ದರು. ಮುಫ್ತಿಯಲ್ಲಿ ಇರುವ ಪೊಲೀಸರು ಮೇಲೆ  ಹಲ್ಲೆ ಮಾಡಿದ್ದಾರೆ. 

ಕಲ್ಲಿನ ದಾಳಿಯಲ್ಲಿ ಕಾನ್‌ಸ್ಟೆಬಲ್ ತಲೆಗೆ ಗಾಯವಾಗಿತ್ತು.  ಕರ್ನಾಟಕ ಪೊಲೀಸರು ತಮ್ಮ ವಾಹನದಲ್ಲಿ  ತಪ್ಪಿಸಿಕೊಂಡು ಎಮ್ಮಿಗನೂರು ಗ್ರಾಮೀಣ ಪೊಲೀಸ್ ಠಾಣೆ ತಲುಪಿದ್ದು, ಗಾಯಗೊಂಡ ಪೊಲೀಸ್ ಪೇದೆಯನ್ನ ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಹಲ್ಲೆ ಕುರಿತಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಂಪರ್ಕಿಸಿದಾಗ ಕುರಿಗಳರನ್ನ ಹಿಡಿಯಲು ಹೋದಾಗ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಆಯಾ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಳಿದು ಬಂದಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply