ಬಳ್ಳಾರಿ- ರಾಜ್ಯದ ನಾನಾ ಕಡೆ ಮನುಷ್ಯರ ಮೇಲೆ ಚಿರತೆ ದಾಳಿ ಪ್ರಕರಣ ಹೆಚ್ಚಾಗಿವೆ. ಅಲ್ಲದೆ ಹಂತ ಚಿರತೆಗಳನ್ನು ಪತ್ತೆ ಹಚ್ಚುವ ಕಾರ್ಯ ಈಗಾಗಲೇ ನಡೆದಿದೆ, ಮೇಲಾಗಿ ಹಂತ ಚಿರತೆಗಳನ್ನು ಶೂಟೌಟ್ ಮಾಡುವ ಬಗ್ಗೆ ‌ಚಿಂತನೆ ನಡೆದಿದೆ ಎಂದು ಆರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗಿವೆ ಅಲ್ಲದೇ ಕಳೆದ ಒಂದು ವಾರದ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಒಬ್ಬ ಬಾಲಕ ಸೇರಿ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಹೀಗಾಗಿ   ಅಂತಹ ಚಿರತೆಗಳನ್ನು ಪತ್ತೆ ಹಚ್ಚುವ ಕೆಲಸ ಆರಂಭವಾಗಿದೆ. ನರಭಕ್ಷಕ ಚಿರತೆಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಮನುಷ್ಯರನ್ನು ತಿನ್ನುವ ಚಿರತೆಗಳನ್ನು ಶೂಟ್ ಮಾಡಲು ಚಿಂತನೆ ನಡೆಯುತ್ತಿದೆ . ಆದ್ರೆ ಇದಕ್ಕೆ ಪರಿಸರ ಪ್ರೇಮಿಗಳ ಆಕ್ಷೇಪಣೆಯೂ ಇದೆ. ಈಗ ಸದ್ಯ ನರಹಂತಕ ಚಿರತೆಗಳನ್ನು ಗುರುತಿಸೋ ಕಾರ್ಯ ಅಧಿಕಾರಿಗಳು ನಡೆಸುತ್ತಿದ್ದಾರೆ. ಅಂತಿಮವಾಗಿ ಚರ್ಚಿಸಿ, ಶೂಟೌಟ್ ನಿರ್ಧಾರಕ್ಕೆ ಬರಲಾಗುತ್ತದೆ  ಎಂದಿದ್ದಾರೆ…

Leave A Reply