ರಾಷ್ಟ್ರೀಯ ಸ್ವಚ್ಛತಾ ಸಿನಿಮಾಗಳ ಅಮೃತ ಮಹೋತ್ಸವ:ರಾಷ್ಟ್ರಮಟ್ಟದ  ಕಿರುಚಿತ್ರ ಸ್ಪರ್ಧೆ

0

ಬಳ್ಳಾರಿ

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ ಮಿಷನ್ ಯೋಜನೆಯ ಎರಡನೇ ಹಂತದ ಉದ್ದೇಶಗಳನ್ನು ಗ್ರಾಮೀಣ ಸಮುದಾಯಕ್ಕೆ ತಿಳಿಸುವ ಸಲುವಾಗಿ ಸಾಮೂಹಿಕ ಜಾಗೃತಿ ಮೂಡಿಸಲು ರಾಷ್ಟ್ರೀಯ ಸ್ವಚ್ಛತಾ ಸಿನಿಮಾಗಳ ಅಮೃತ ಮಹೋತ್ಸವ ಎಂಬ ರಾಷ್ಟ್ರಮಟ್ಟದ  ಕಿರುಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

ಸ್ಪರ್ಧೆಯನ್ನು ವಿಷಯಾಧಾರಿತ ಮತ್ತು ಭೌಗೋಳಿಕ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ವಿಷಯಾಧಾರಿತ ವಿಭಾಗದಲ್ಲಿ ಜೈವಿಕ ವಿಘಟನೆಯ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ, ನಡವಳಿಕೆ ಬದಲಾವಣೆ ಎಂಬ ವಿಷಯವನ್ನು ಕುರಿತು ಕಿರುಚಿತ್ರಗಳನ್ನು ರೂಪಿಸಬೇಕಿದೆ. ಭೌಗೋಳಿಕ ವಿಭಾಗದಲ್ಲಿ ಮರುಭೂಮಿ, ಗುಡ್ಡಗಾಡು, ಕರಾವಳಿ, ಬಯಲುಪ್ರದೇಶ, ಪ್ರವಾಹಪೀಡಿತ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಎರಡನೇ ಹಂತದ ಆಶಯ, ಅನುಷ್ಠಾನ ವಿಷಯ ಕುರಿತು ಕಿರುಚಿತ್ರಗಳನ್ನು ಚಿತ್ರಿಸಿ ಕಳುಹಿಸಬಹುದು ಎಂದು ಅವರು ತಿಳಿಸಿದ್ದಾರೆ.

ವಿಷಯಾಧಾರಿತ ವಿಭಾಗದ ಬಹುಮಾನ: ವಿಷಯಾಧಾರಿತ ವಿಭಾಗದ ಬಹುಮಾನದ ಮೊತ್ತ ಪ್ರಥಮ 1.60 ಲಕ್ಷ ರೂ.ಗಳು ದ್ವೀತಿಯ ಬಹುಮಾನ 60 ಸಾವಿರ ರೂ.ಗಳು ಮತ್ತು ತೃತೀಯ ಬಹುಮಾನದ ಮೊತ್ತ 30 ಸಾವಿರ ರೂ. ಗಳಾಗಿರುತ್ತದೆ. ಭೌಗೋಳಿಕ ವಿಭಾಗದ ಬಹುಮಾನದ ಮೊತ್ತ ಪ್ರಥಮ 2 ಲಕ್ಷ ರೂ.ಗಳು, ದ್ವೀತಿಯ ಬಹುಮಾನ 1.20 ಲಕ್ಷ ರೂ.ಗಳು ಮತ್ತು ತೃತೀಯ ಬಹುಮಾನದ ಮೊತ್ತ 80 ಸಾವಿರ ರೂ.ಗಳಾಗಿರುತ್ತದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply