ಹೊಸಪೇಟೆ – ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಹೇಮಕೂಟದ ಸ್ವಾಮೀಜಿಗಳಾದ ಶ್ರೀ ದಯಾನಂದ ಮಹಾ ಸ್ವಾಮೀಜಿ ಅವರು ಜಿಲ್ಲಾ ವಿಭಜನೆಗೆ ಬೆಂಬಲ ನೀಡಿದ್ದಾರೆ. ಹೊಸಪೇಟೆಯಲ್ಲಿ ಇಂದು ಸ್ವಾಮೀಜಿ ನೇತ್ರತ್ವದಲ್ಲಿ ನೂರಾರು ಜನ ವಿಜಯನಗರ ಜಿಲ್ಲೆಗೆ ಬೆಂಬಲಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಹೊಸಪೇಟೆ ತಹಶೀಲ್ದಾರ್ ರವರ ಮುಖಾಂತರ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಆದಷ್ಟೂ ಬೇಗ ಜಿಲ್ಲಾ ವಿಭಜನೆ ಮಾಡಿ ಸರ್ಕಾರ ಕೂಡಲೇ ಆದೇಶ ಹೊರಡಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು , ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿರುವುದು ಸರ್ಕಾರದ  ಒಂದು ಒಳ್ಳೆಯ ನಿರ್ಧಾರ. ಜಿಲ್ಲೆಯ ಬಹುತೇಕ ತಾಲೂಕುಗಳು ಜಿಲ್ಲಾ ಕೇಂದ್ರದಿಂದ ಸಾಕಷ್ಟು ದೂರ ಇವೆ . ಹೀಗಿರುವಾಗ ಸರ್ಕಾರ ನೂತನ ವಿಜಯನಗರ ಜಿಲ್ಲೆಯಾಗಿ ಘೋಷಣೆ ಮಾಡಿರುವುದನ್ನು ನಾನು ಸ್ವಾಗತ ಮಾಡುತ್ತೆನೆ ಎಂದಿದ್ದಾರೆ. ಅಲ್ಲದೇ ಸರ್ಕಾರ ಕೂಡಲೇ ಅಂತಿಮ ಆದೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾದ  ಗುಜ್ಜಲ ನಾಗರಾಜ್, ತಾರಿಹಳ್ಳಿ ಹನುಮಂತಪ್ಪ, ಪಿ.ವಿ.ವೆಂಕಟೇಶ್, ಗುಜ್ಜಲ ಗಣೇಶ, ನಿಂಬಗಲ್ ರಾಮಕೃಷ್ಣ,    ಪ್ರೋ.ರೇವಣಸಿದ್ದಪ್ಪ, ಅಗಳಿ ಭಾಸ್ಕರ, ಕೋಳಗದ ಕೀರ್ತಿ, ಕೋಳಗದ ವೇಂಕಟೇಶ್, ಪರಗಿ ಶ್ರೀಶೈಲ, ಸತೀಶ್,  ವಿನಾಯಕ ಶೆಟ್ಟರ್ , ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು…

About Author

Priya Bot

Leave A Reply