ದೆಹಲಿ-  ಕರೋನಾ ಮಹಾ ಮಾರಿಗೆ ಕರೋನಾ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋ ವ್ಯಾಕ್ಸಿನ್ ಸಂಜೀವಿನಿ ಅಮದು ಹೇಳಲಾಗುತ್ತಿದೆ‌ ಆದ್ರೆ ಈ ಲಸಿಕೆ ಸ್ವೀಕರಿಸಿದ 52 ಜನರಿಗೆ ಅಡ್ಡ ಪರಿಣಾಮ ಆಗಿದೆ ಎಂದು ದೆಹೆಲಿ ಸರ್ಕಾರ ಹೇಳಿದೆ. ಮೊದಲ ಹಂತದಲ್ಲಿ ಶನಿವಾರ ಕೋವಿಡ್-19 ಲಸಿಕೆಯನ್ನು ದೇಶದಾದ್ಯಂತ ವಿತರಿಸಲಾಯಿತು. ಕೋವಿಡ್-19 ಲಸಿಕೆ ಸ್ವೀಕರಿಸಿದ ನಂತರ ದೆಹಲಿಯಲ್ಲಿ 52 ಜನರ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ದೆಹಲಿ ಸರ್ಕಾರ ಘೋಷಿಸಿದೆ. ದೆಹಲಿ ಪೂರ್ವ,ದಕ್ಷಿಣ ಉತ್ತರ-ಪಶ್ಚಿಮ ಸೇರಿದಂತೆ ಒಟ್ಟು  4 ರಿಂದ 5 ಪ್ರಕರಣಗಳು ಗಂಭೀರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಾಜಧಾನಿ ದೆಹಲಿಯ ಒಟ್ಟು 81 ಸ್ಥಳಗಳಲ್ಲಿ ಕೋವಿಡ್-19 ವ್ಯಾಕ್ಸಿನ್ ನೀಡಲು ದೆಹಲಿ ಸರ್ಕಾರ ಘೋಷಿಸಿತ್ತು. ಇದರಲ್ಲಿ ಎನ್‍ಡಿಎಂಸಿ ಚಾರಕ್ ಪಾಲಿಕ್ ಆಸ್ಪತ್ರೆಯ ಇಬ್ಬರು ಮಹಿಳಾ ಸಿಬ್ಬಂದಿಗಳ ಮೇಲೆ ಕೋವಿಡ್-19 ಲಸಿಕೆ ಅಡ್ಡಪರಿಣಾಮ ಬೀರಿದ್ದು, ಉಸಿರಾಟ ತೊಂದರೆಯಿಂದ ಒದ್ದಾಡಿದ್ದರು. ಹಾಗಾಗಿ ಅವರನ್ನು ತೀವ್ರ ನಿಗಾ ಕೊಠಡಿಯಲ್ಲಿ ಇರಿಸಲಾಯಿತು. 30 ನಿಮಿಷಗಳ ಬಳಿಕ ಸಹಜ ಸ್ಥಿತಿಗೆ ಬಂದ ಮೇಲೆ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು ಎಂದು ದೆಹಲಿ ಪುರಸಭಾ ಅಧಿಕಾರಿ ತಿಳಿಸಿದ್ದಾರೆ.

About Author

Priya Bot

Leave A Reply