ಬಡ ಮಕ್ಕಳ ಸಮವಸ್ತ್ರಕ್ಕೆ ಬೆಂಕಿ ಇಟ್ಟ ಪಾಪಿಗಳು

0

ಶಿವಮೊಗ್ಗ- ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದ ಬಡ ಮಕ್ಕಳ ಸಮವಸ್ತ್ರಕ್ಕೆ‌ ಕಿಡಗೇಡಿಗಳು ಬೆಂಕಿ ಇಟಿದ್ದಾರೆ.  ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಸಮವಸ್ತ್ರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ಒಂದು ವಿಲಕ್ಷಣ ಘಟನೆಗೆ‌ ಸಾಕ್ಷಿಯಾಗಿದ್ದು, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾರುತಿಪುರ ಸರಕಾರಿ ಪ್ರೌಢಶಾಲೆ.

ಈ ಪ್ರೌಡ ಶಾಲೆಯಲ್ಲಿ ಸುಮಾರು 300 ಜೊತೆ ಸಮವಸ್ತ್ರಗಳನ್ನು ಇಡಲಾಗಿದ್ದು, ಶಾಲೆಯಲ್ಲಿ ಇಟ್ಟಿದ್ದ ಸಮವಸ್ತ್ರಕ್ಕೆ ಬೆಂಕಿ ಹಚ್ವಿದ್ದಾರೆ. ಕಳೆದ 4 ದಿನದ ಹಿಂದೆ ಬಿಇಒ ಕಚೇರಿಯಿಂದ ಶಾಲೆಗೆ ಸಮವಸ್ತ್ರವನ್ನು ಅಲ್ಲಿನ ಶಿಕ್ಷಕರು ತಂದಿದ್ದರು.
ಇಂದು ಶಾಲಾ ಕೊಠಡಿ‌ ತೆರೆದಾಗ ಬಟ್ಟೆಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಸಂಬಂಧ  ಹೊಸನಗರ ಠಾಣೆಗೆ ದೂರು ನೀಡಲು  ಮುಖ್ಯ ಶಿಕ್ಷಕರು ಮುಂದಾಗಿದ್ದಾರೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply