ನವದೆಹಲಿ- ಈ ವರ್ಷದ ಬಜೆಟ್ ಮೇಲೆ ಬಡವರು ಬೆಟ್ಟದಷ್ಟು ಆಸೆ ಇಟ್ಟು ಎದುರು ನೋಡುತ್ತಿದ್ದರು. ಯಾವ ವಸ್ತುಗಳ ಬೆಲೆ ಇಳಿಕೆ ಆಗುತ್ತೆ ಅಂಥಾ ಕಾದು ಕುಳಿತಿದ್ದ ದೇಶದ ಜನರಿಗೆ ತನ್ನೀರು ಎರಚಿದ ಹಾಗೆ ಆಗಿದೆ. ಒಂದು ಕಡೆ ರೈತರನ್ನು ಉದ್ದಾರ ಮಾಡುವುದಾಗಿ ಹೇಳಿದ ಕೇಂದ್ರ ಸರ್ಕಾರ ಬಡ ಜನತೆಯ ಮೇಲೆ ಬರೆ ಎಳೆದಿದೆ. ಅದರಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಡವರ ಜೇಬಿಗೆ ಕತ್ತರಿ ಹಾಕಿದೆ. ಕರೋನಾ ಹೊಡೆತದ ನಡುವೆ ಈ ಬಾರಿಯ ಕೇಂದ್ರ ಬಜೆಟ್ ಇಡೀ ರಾಷ್ಟ್ರದ ಜನ ಆಸೆಗಣ್ಣಿನಿಂದ ನೋಡುತ್ತಾ ನಿಂತವರಿಗೆ ಚಿನ್ನ ಮುಟ್ಟಂಗಿಲ್ಲಾ ಪೆಟ್ರೋಲ್ ಗಾಡಿ ಏರಂಗಿಲ್ಲಾ , ಎಣ್ಣೆ ಹೊಡಿಯೊಂಗಿಲ್ಲಾ ಎನ್ನುವ ಹಾಗೆಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಂಡ ಹಾಗಾಗಿದೆ. ಇನ್ನು ರೈತರ ಕೃಷಿ ಕ್ಷೇತ್ರದ ಅಭಿವೃದ್ಧಿಯ ಹೆಸರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ, ಬೇಳೆ, ಚಿನ್ನಾ ಬೆಳ್ಳಿ, ಪೆಟ್ರೋಲ್, ಡಿಸೇಲ್ ಸೇಬಿನ ಮೇಲೆ, ಕಲ್ಲಿದ್ದಲು, ಸೆಸ್ ಫ್ಲವರ್ ಆಯಿಲ್ ಹೀಗೆ ಬಡ ಹಾಗೂ ಮಧ್ಯಮ ವರ್ಗದ ಜನರು ಉಪಯೋಗಿಸುವ ಅಗತ್ಯ ವಸ್ತುಗಳ ಮೇಲೆ ಕೃಷಿ ಟ್ಯಾಕ್ಸ್ ವಿಧಿಸಿದೆ.