ಫುಡ್ ಕಿಟ್ ಗಾಗಿ ಕಾಯುತ್ತ ಕುಳಿತ ಕಾರ್ಮಿಕರು.

0

ರಾಯಚೂರು  – ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಗುತ್ತಿದ್ದು, ರಾಯಚೂರಿನಲ್ಲಿ ನಸುಕಿನಲ್ಲಿಯೇ ಕಾರ್ಮಿಕರು ಮಕ್ಕಳೊಂದಿಗೆ ಫುಡ್ ಕಿಟ್ ಗಾಗಿ ಕಾದುಕುಳಿತ್ತಿದ್ದಾರೆ. ನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಇಂದು ಆಹಾರ ಕಿಟ್ ವಿತರಣೆ ಮಾಡಲಾಗುವುದು ಕಾರ್ಮಿಕರಿಗೆ ಮಾಹಿತಿ ನೀಡಲಾಗಿದೆ.

ಹೀಗಾಗಿ ಕಾರ್ಮಿಕರು ಬೆಳಂಬೆಳಗ್ಗೆ ತಮ್ಮ ಮಕ್ಕಳೊಂದಿಗೆ ನೂರಾರು ಕಾರ್ಮಿಕರು ಬಾಲಕಿಯರ ವಸತಿ ನಿಲಯದ ಮುಂದೆ ನಿಂತಿದ್ದಾರೆ. ಕಾರ್ಮಿಕ ಇಲಾಖೆಯಿಂದ ಮಧ್ಯಾಹ್ನ 3.30ರ ನಂತರದಲ್ಲಿ ಕಿಟ್ ವಿತರಣೆ ಮಾಡುವುದಾಗಿ ಸೂಚನೆ ನೀಡಲಾಗಿದೆ.

ಆದ್ರೆ ಕಾರ್ಮಿಕರು ಅವಧಿಗೂ ಮುನ್ನವೇ, ನಗರದ ನಾನಾ ಬಡವಣೆಗಳಲ್ಲಿ ವಾಸಿಸುವ ಕಾರ್ಮಿಕರು ಬಂದು ಕಾಯುತ್ತಾ ಕುಳಿತ್ತಿದ್ದಾರೆ. ನಿತ್ಯ ಕೂಲಿ ಮಾಡಿ ಬಂದ ಆದಾಯದಲ್ಲಿ ಜೀವನ ಸಾಗಿಸುವ ಕಾರ್ಮಿಕರು, ಬೆಳಿಗ್ಗೆಯಿಂದಲೇ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕಾಯುತ್ತಾ ಕುಳಿತಿದ್ದು, ಅತ್ತ ಕಿಟ್ ಇಲ್ಲದೇ, ಇತ್ತ ದಿನ ಕೆಲಸವೂ ಇಲ್ಲದೆ ಕಾಯಬೇಕಾದ ಸನ್ನಿವೇಶ ಕಾರ್ಮಿಕರಿಗೆ ಎದುರಾಗಿದ್ದು, ಸೂಕ್ತವಾದ ಮಾಹಿತಿ ನೀಡುತ್ತಿಲ್ಲ ಅಂತಾರೆ ಕಾರ್ಮಿಕರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply