ಮೂರು ದಿನ ಮನೆ ಮಂದಿಗೆ ನಿದ್ದೆ ಗೆಡಿಸಿದ್ದ ಹಾವು ಸೆರೆ ಹಿಡಿದ ಉರಗ ತಜ್ಞ

0

ವಿಜಯನಗರ – ಕಳೆದ ಮೂರು ದಿನಗಳಿಂದ ಮನೆ ಮಂದಿಯ ನಿದ್ದೆ ಗೆಡಿಸಿದ್ದ ಕೆರೆ ಹಾವನ್ನು ಉರಗ ತಜ್ಞ ಸೆರೆ ಹಿಡಿದಿದ್ದಾರೆ‌. ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಮರಿಯಮ್ಮನಹಳ್ಳಿಯ ಮನೆಯೊಂದರಲ್ಲಿ ಕೆರೆ ಹಾವು ಅವಿತು ಕುಳಿತಿತ್ತು.

ರಾತ್ರಿ ಎಲ್ಲರು ಮಲಗಿದ್ದ ಸಮಯದಲ್ಲಿ ಮನೆ ಒಳಗೆ ಹಾವು ಪ್ರವೇಶ ಮಾಡಿದ್ದು, ಇದರಿಂದ ಮನೆ ಮಂದಿಯಲ್ಲಾ ಗಾಬರಿಗೊಂಡು ರಾತ್ರಿ ಇಡಿ ಹುಡುಕಾಟ ನಡೆಸಿದ್ದರು,  ಹಾವು ಕಣ್ಮರೆಯಾಗಿತ್ತು. ಹಿನ್ನೆಲೆಯಲ್ಲಿ ಇಂದು ಹೊಸಪೇಟೆಯ ಉರಗ ತಜ್ಞ  ಇಮಾಮ್ ಖಾಸಿಂ ಅವರನ್ನು ಕರೆಯಿಸಿ ಹಾವನ್ನು ಸೆರೆ ಹಿಡಿಯಲಾಗಿದೆ.‌ ಸುಮಾರು ಅಡಿ ಉದ್ದದ ಹಾವನ್ನು ಸೆರೆ ಹಿಡಿಯಲಾಗಿದ್ದು, ಸೆರೆ ಹಿಡಿದ ಹಾವನ್ನು ಬಳಿಕ ಅರಣ್ಯಕ್ಕೆ ಬಿಡಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply