ಬಳ್ಳಾರಿ- ಅಯೋಧ್ಯೆಯಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಹಣ ಸಂಗ್ರಹ ಅಭಿಯಾನ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಿಯನಕ್ಕೆ ಚಾಲನೆ ನೀಡಿದರು. ಇಂದು ಬೆಳ್ಳಿಗ್ಗೆ ಬಳ್ಳಾರಿಯ ರೇಣುಕಾ ನಗರದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಂಜನೇಯನ ಪರಮ ಭಕ್ತನಾಗಿರುವ ಶಾಸಕ ಸೋಮಶೇಖರರೆಡ್ಡಿ ಆಂಜನೇಯನಿಗೆ ಪೂಜೆ ಸಲ್ಲಿಸಿ ತಮ್ಮ ದೇಣಿಗೆ ಸಂಗ್ರಹ ಕಾರ್ಯವನ್ನು ಆರಂಭಿಸಿದರು. ದೇವಸ್ಥಾನದ ಅಕ್ಕ ಪಕ್ಕದ ಮನೆಗೆ ತೆರಳಿ ದೇಣಿಗೆ ಸಂಗ್ರಹಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಬಿಜಿಪಿ ಮುಖಂಡರಾದ ಶ್ರೀನಿವಾಸ ಮೋತ್ಕರ್, ಜೆ.ಅನಿಲನಾಯ್ಡು ಸೇರಿದಂತೆ ಇನ್ನಿತರು ಸೋಮಶೇಖರರೆಡ್ಡಿ ಅವರಿಗೆ ಸಾತ್ ನೀಡಿದರು.