ಬೆಂಗಳೂರು-ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ‌, ಮಾಜಿಸಚಿವ  ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ಸಂತ್ರಸ್ತೆ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಸಚಿವರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಾಗಿಲ್ಲಾ. ಕಾರಣ ಅವರ ಹೇಳಿಕೆ ಸಿಗುವವರೆಗೂ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.‌

ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರು ಆಧರಿಸಿ ತನಿಖೆ ಆರಂಭಿಸಿರುವ ಕಬ್ಬನ್ ಪಾರ್ಕ ಠಾಣೆ ಪೊಲೀಸರು, ವಿಶೇಷ ತಂಡಗಳನ್ನು ರಚಿಸಿ ಸಂತ್ರಸ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯೇ ವಿಶೇಷ ತಂಡಗಳನ್ನು ರಚನೆ ಮಾಡಿದ ಪೊಲೀಸರು ಆ ಯುವತಿಗಾಗಿ ಹುಡುಕಾಟ‌ ನಡೆಸಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಬಹುತೇಕ ಪಿಜಿಗಳನ್ನು ಈಗಾಗಲೇ ಜಾಲಾಡಿದ್ದಾರೆ. ಆದ್ರೆ ಸಂತ್ರಸ್ತ ಮಹಿಳೆ ಮಾತ್ರ ಈ ವರೆಗೂ ಪತ್ತೆಯಾಗಿಲ್ಲಾ.

‘ಆರ್‌.ಟಿ.ನಗರದಲ್ಲಿರುವ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರಲ್ಲಿ ಯುವತಿ ವಾಸವಿದ್ದಳು’‌ ಎಂಬ ಮಾಹಿತಿ ಆಧರಿಸಿ ಪೊಲೀಸರು, ಪೇಯಿಂಗ್ ಗೆಸ್ಟ್ ಕಟ್ಟಡಗಳಿಗೆ ಹೋಗಿ ಮಾಲೀಕರನ್ನು ಹಾಗೂ ವಾಸಿಗಳನ್ನು ವಿಚಾರ ನಡೆಸಿದ್ದಾರೆ. ಆದ್ರೆ ಅವಳು ಪಿಜಿಯಲ್ಲಿ ವಾಸವಾಗಿರಲ್ಲಾ ಎನ್ನುವ ಸತ್ಯ ಹೊರಬಿದ್ದಿದೆ. ಅವಳು ಪಿಜಿ ಬದಲಿಗೆ ಬಹು ಮಹಡಿ ಕಟ್ಟಡದಲ್ಲಿ ವಾಸವಾಗಿದ್ದು, ಅವಳು ವಾಸ ವಿದ್ದ ಮನೆ ಈಗ ಪೊಲೀಸರು ಪತ್ತೆ ಮಾಡಿದ್ದಾರೆ. ‌ಆದ್ರೆ ಸಿಡಿ ಬಿಡುಗಡೆಯಾದ ದಿನವೇ ಅವಳು ಮನೆ ಕಾಲಿ ಮಾಡಿಕೊಂಡು ಬೇರೆಡೆ ಹೋಗಿದ್ದು, ಹೀಗಾಗಿ ಪೊಲೀಸರು ಅವಳ ಹುಡುಕಾಟದಲ್ಲಿ ತೊಡಗಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply