ಬೆಂಗಳೂರು-  ತಂದೆಯ ಮೇಲಿನ ದ್ವೇಷಕ್ಕೆ ಮಗನನ್ನು ಕೊಲೆಗೈದಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.ಆಕಾಶ್ ( 19) ಕೊಲೆಯಾದವರು. ಆಕಾಶ್ ತಂದೆ ವೇಲು ಮೇಲಿನ ದ್ವೇಷಕ್ಕೆ ಆಕಾಶ್ ನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕಾಶ್ ತಂದೆ ವೇಲು ಹಾಗೂ ರಾಜವೇಲು (22) ಎಂಬಾತ ಸ್ನೇಹಿತರಾಗಿದ್ದು. ಕಳೆದ 40 ದಿನಗಳ‌ ಹಿಂದೆ ವೇಲು ಜತೆಯಿದ್ದಾಗಲೇ ರಾಜವೇಲು ಅನುಮಾನಸ್ಪದವಾಗಿ ಮೃತಪಟ್ಟಿದ್ದ.‌ ಈ ಕುರಿತು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿತ್ತು. ಈ‌ ಮಧ್ಯೆ ರಾಜವೇಲು ಸಾವಿಗೆ  ವೇಲುವೇ ಕಾರಣ ಎಂದು ರಾಜವೇಲು ಸಂಬಂಧಿಕರು ದ್ವೇಷ ಸಾಧಿಸುತ್ತಿದ್ದರು.

ಇದೇ ಕಾರಣಕ್ಕೆ ಬುಧವಾರ ರಾತ್ರಿ ತಮ್ಮ‌ ಮನೆ ಸಮೀಪ  ವೇಲು ಮಗ ಆಕಾಶ್ ಶೌಚಾಲಯಕ್ಕೆ ತೆರಳಿದಾಗ ಏಕಾಏಕಿ ಕೆಲವರು  ಚಾಕು ಹಾಗೂ ರಾಡ್ ನಿಂದ ಹಲ್ಲೆ ಮಾಡಿ ಆಕಾಶ್  ಕೊಲೆ ಮಾಡಿದ್ದರು ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply