ದಾವಣಗೆರೆ – ಯತ್ನಾಳಗೆ ಮಾಡೋಕೆ ಕೆಲಸ‌ ಇಲ್ಲ, ಅವರ ಟೀಕೆಗಳಿಗೆಲ್ಲ ಉತ್ತರ ಕೊಡೋಕೆ ಆಗೋದಿಲ್ಲ, ಹದಿನೇಳು ಜನಕ್ಕೆ ಮಾತ್ರವಲ್ಲ ಎಲ್ಲರಿಗೂ ಸಿಎಂ ಅನುದಾನ ಕೊಟ್ಟಿದ್ದಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಕ್ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾಯತ್ರಿಯಲ್ಲಿ ಮಾತನಾಡಿದ ಅವರು, ಈ ಹದಿನೇಳು ಜನರು ಬರದಿದ್ದರೆ ಇವತ್ತು ಬಿಜೆಪಿ ಸರಕಾರ ಬರುತ್ತಿರಲಿಲ್ಲ ಎಂಬುದನ್ನ ಯತ್ನಾಳ ಅರ್ಥ ಮಾಡಿಕೊಳ್ಳಲಿ. ಇವರ ಲೆಟರ್ ಹೆಡ್ ಗಳಲ್ಲೆ ಧೂಳು ತಿನ್ನುತ್ತಿದ್ದವು, ಹದಿನೇಳು ಜನರ ತ್ಯಾಗದಿಂದ ಬಿಜೆಪಿ ಸರಕಾರ ಬಂದಿದೆ. ಸರಕಾರ ಬಂದಿರೋದಕ್ಕೆ ಅವರು ಇಷ್ಟೆಲ್ಲ ಮಾತಾಡ್ತಿದ್ದಾರೆ. ಅದು ಅವರಿಗೆ  ಸರಿಯಲ್ಲ. ಟೀಕೆ, ಟಿಪ್ಪಣಿ ಯಾವಾಗಲೋ ಒಂದು ಬಾರಿಯಾದರೆ ಒಳ್ಳೆಯದು, ಅದೇ ಪದೇ ಪದೇ ಆದರೆ ಹೇಗೆ ಎಂದು ಪ್ರಶ್ನೆ ಮಾಡಿದ್ರು. ಇನ್ನೂ ರಾಜ್ಯದಲ್ಲಿ ಯಡಿಯೂರಪ್ಪನವರ ಹೋರಾಟದಿಂದ ಬಿಜೆಪಿ ಸರಕಾರ ಬಂದಿದೆ.

ಸರಕಾರ ರಚನೆ ವೇಳೆ ಯಡಿಯೂರಪ್ಪ ಬಿಟ್ಟರೆ ಇವರಾರು ಬಂದಿರಲಿಲ್ಲ. ಈಗ ಯಡಿಯೂರಪ್ಪ ಅವರನ್ನ ನಂಬಿಕೊಂಡು ಹದಿನೇಳು ಜನರು ಬಂದಿದ್ದೇವೆ. ಅದಕ್ಕೆ ಬಿಜೆಪಿ ಸರಕಾರ ಸುಭದ್ರವಾಗಿದೆ. ಅದನ್ನು ಯತ್ನಾಳರು ಅರಿತುಕೊಳ್ಳಲಿ. ಸುಮ್ಮನೆ ನಾಲಿಗೆ ಇದೆ ಅಂತಾ ಏನೇನೋ‌ ಮಾತನಾಡಿದರೆ ಸರಿಯಲ್ಲ. ಈ ಹಿಂದೆ ಯತ್ನಾಳ ಅವರನ್ನ ಕರೆದುಕೊಂಡು ಬಂದಿದ್ದು ಕೂಡ ಯಡಿಯೂರಪ್ಪನವರೆ. ಅದು ಅರ್ಥ ಇರಲಿ ಅವರಿಗೆ ಎಂದು ಎಚ್ಚರಿಸಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply