ಚಾಮರಾಜನಗರ- ಕ್ರೀಡೆಗಳು ಮನುಷ್ಯನ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಿನ ಕಾಲದಿಂದಲ್ಲೂ ಕ್ರೀಡೆಗಳಿಗೆ ಅದರದ್ದೇ ಮಹಾತ್ವ ಇದೇ, ಕ್ರೀಡಾಪಟುಗಳು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು  ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತದ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಪಂ, ಮತ್ತು ಯುವಜನಸೇವೆ ಮತ್ತು ಕ್ರೀಡಾಇಲಾಖೆ ವತಿಯಿಂದ ನಡೆದ ತಾಲೂಕುಮಟ್ಟದ ವಾಲಿಬಾಲ್, ಕಬ್ಬಡಿ ಕ್ರೀಡಾಕೂಟವನ್ನು ವಾಲಿಬಾಲ್ ಎಸೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳು ಪಠ್ಯೆತರ ಚಟುವಟಿಕೆಗಳ ಒಂದುಭಾಗವೇ ಆಗಿದೆ, ಇಂದಿನ ಯುವ ಸಮುದಾಯ ಪಠ್ಯಸೇರಿದಂತೆ ಬದುಕಿಗೆ ನೆರವಾಗುವ ಚಟುವಟಿಕೆಗಳತ್ತ  ಗಮನಹರಿಸದೇ ತಮ್ಮ ಅಮೂಲ್ಯವಾದ ಸಮಯ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಮಾನಸಿಕ ಹಾಗೂ ದೈಹಿಕವಾಗಿ ನಮ್ಮನ್ನು ಸದೃಡವಾಗಿಸುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆಕ್ರಮಣಕಾರಿಯಾಗಿ ಆಡುವ ನೈಪುಣ್ಯತೆ ಬೆಳೆಸಿಕೊಳ್ಳಬೇಕು ಎಂದರು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply