ಹಾವೇರಿ – ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರದಿಂದ ಶ್ರೀಸಿದ್ಧಲಿಂಗೇಶ್ವರಸ್ವಾಮಿ ಸಂಸ್ಕೃತ, ವೇದ, ಜೋತಿಷ್ಯ ಮತ್ತು ವೀರಶೈವಾಗಮ ಪಾಠಶಾಲೆಯನ್ನು ನಡೆಸಲಾಗುತ್ತಿದೆ. 2020-21ನೇ ಸಾಲಿನ ಶೈಕ್ಷಣಿಕ ತರಗತಿಗಳು 03-01-2021ರಿಂದ ಪ್ರಾರಂಭವಾಗಿವೆ.

ಸಂಸ್ಕೃತ ಪ್ರಥಮ 1, 2, 3ನೇ ತರಗತಿಗಳು, ಸಂಸ್ಕೃತ ಕಾವ್ಯ 1, 2ನೇ ತರಗತಿಗಳು, ವೀರಶೈವ ವೇದ,ಪ್ರಥಮ, ಪ್ರವೇಶ ಮೂಲ ತರಗತಿಗಳು, ವೀರಶೈವಾಗಮ ಪ್ರವರ ಮತ್ತು ಪ್ರವೀಣ ತರಗತಿಗಳು, ಜ್ಯೋತಿಷ್ಯ ತರಗತಿಗಳನ್ನು ಉಚಿತವಾಗಿ ಬೋಧಿಸಲಾಗುತ್ತದೆ. ಪ್ರವೇಶಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ. ಆಸಕ್ತರು  ಮುಖ್ಯೋಪಾಧ್ಯಾಯರು ಶ್ರೀಸಿದ್ಧಲಿಂಗೇಶ್ವರಸ್ವಾಮಿ ಸಂಸ್ಕೃತ, ವೇದ, ಜೋತಿಷ್ಯ ಮತ್ತು ವೀರಶೈವಾಗಮ ಪಾಠಶಾಲೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಎಡೆಯೂರು- 572142 ಇವರನ್ನು ಸಂಪರ್ಕಿಸಿ, ಸಂಸ್ಕೃತ ಪಾಠಶಾಲೆಗೆ ಪ್ರವೇಶ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449926809, 9844295188, 971110045ನ್ನು ಸಂಪರ್ಕಿಸಬಹುದು.

About Author

Priya Bot

Leave A Reply