*ವಿಷಯ: ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟದ ವತಿಯಿಂದ ಮನೆ ಮನೆಯಿಂದ ರಾಜ್ಯ ಮಟ್ಟದ ಆನ್ ಲೈನ್ ಪ್ರತಿಭಟನೆ*

SUCI(C), CPI(M), CPI, RPI ಹಾಗೂ ಇನ್ನಿತರ ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟವು, ಇಂದು ಕೇಂದ್ರ- ರಾಜ್ಯ ಸರ್ಕಾರಗಳು ಕೋರನಾ ಪರಿಸ್ಥಿತಿ ನಿರ್ಲಕ್ಷ್ಯ ಧೋರಣೆಯಿಂದ ಹಾಗೂ ಅವೈಜ್ಞಾನಿಕನೀತಿಯಿಂದ ನಿರ್ವಹಿಸಿದ ರೀತಿಯನ್ನು ಖಂಡಿಸಿ ಹಾಗೂ ಈ ಸರ್ಕಾರದ ಕಾರ್ಪೋರೇಟ್ ಮಾಲೀಕರ ಪರ ಹಾಗೂ ಜನವಿರೋಧಿ ನೀತಿಗಳನ್ನು ವಿರೋಧಿಸಿ, ರಾಜ್ಯ ಮಟ್ಟದ ಆನ್ ¯ ಲೈನ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ಬಳ್ಳಾರಿಯಲ್ಲಿ ಜನಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಸಾವಿರಾರು ಸಂಖ್ಯೆಗಳಲ್ಲಿ
ಜನರು ತಮ್ಮ ತಮ್ಮ ಮನೆಗಳಲ್ಲೇ, ವಿವಿಧ ಬೇಡಿಕೆಗಳ ಭಿತ್ತಿಪತ್ರ ಹಿಡಿದುಕೊಂಡು ಪ್ರದರ್ಶಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ
ಅಪ್‌ಲೋಡ್ ಮಾಡುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕುಂಟುಬದ ಸದಸ್ಯರು ಈ ಹೋರಾಟಕ್ಕೆ ಸಾಥ್ ನೀಡಿದರು. ಸರ್ವರಿಗೂ ಶೀಘ್ರದಲ್ಲಿ ಉಚಿತ ಲಸಿಕೆ, ಔಷಧಿ ಚಿಕಿತ್ಸೆ ಒದಗಿಸಿ, ನೇರ ನಗದು ಹಾಗೂ ಉಚಿತ ಪಡಿತರ ನೀಡಿರಿ, ರೈತ-ಕಾರ್ಮಿಕ ವಿರೋದಿಸಿಕಾನೂನುಗಳನ್ನು ರದ್ದುಪಡಿಸಿ, ಉದ್ಯೋಗ ಖಾತ್ರಿ ಯೋಜನೆ 200ದಿನಕ್ಕೆ ಹೆಚ್ಚಿಸಿ ಹಾಗೂ ನಗರಗಳಿಗೂ ವಿಸ್ತರಿಸಿ, ಕೋವಿಡ್ ವಾರಿಯರ್ಸ್ ಸುರಕ್ಷತೆ ಒದಗಿಸಿ ಈ ಬೇಡಿಕೆಗಳಿಗಾಗಿ ರಾಜ್ಯ ಮಟ್ಟದ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಕೊರಾನಾ ಎರಡನೇ ಅಲೆಯಲ್ಲಿ ಮುನ್ಸೂಚನೆ ಇದ್ದರೂ ಸಹ, ಕೇಂದ್ರ-ರಾಜ್ಯ ಸರ್ಕಾಗಳು ಅದನ್ನು ಗಂಭೀರ ವಿಷಯವಾಗಿ
ಪರಿಗಣಿಸಲಿಲ್ಲ. ಲಸಿಕೆ, ವೆಂಟಿಲೇಟರ್, ಆಕ್ಸಿಜನ್ ಗಳನ್ನು ಬೇಕಾದಷ್ಟು ಒದಗಿಸಲು ಸರ್ಕಾರಗಳನ್ನು ಬೇಜಾವಾಬ್ದಾರಿಯನ್ನು ತೋರಿದ್ದು ಅತ್ಯಂತ ಖಂಡನೀಯ. ಕೋವಿಡ್ ಮೊದಲ ಅಬಳಸಿಕೊಂಡು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ತಂದು ರೈತ ಸಂಕುಲದ ಮೇಲೆ ಕೇಂದ್ರ ಸರ್ಕಾರ ಗದಾಪ್ರಹಾರ ಮಾಡಿದೆ. ಕೇಂದ್ರ-ರಾಜ್ಯ ಸರ್ಕಾರಗಳನ್ನು ಕೇವಲ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿದ್ದಾರೆ ಹೊರತು, ಕೊರಾನ ಪರಿಸ್ಥಿತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಯಾವ ರೀತಿಯಲ್ಲಿ ಸೂಕ್ತ ಪರಿಹಾರ ನೀಡಿಲ್ಲ. ಒಂದೆಡೆ ಕೊರಾನ ಸಂಕಷ್ಟದಲ್ಲಿ ಜನರ ಒಂದೊಪ್ಪತ್ತಿನ ಊಟಕ್ಕೆ ಪರದಾಡುತ್ತಿದ್ದರೆ, ಅಂಬಾನಿ-ಅದಾನಿಗಳ ಆಸ್ತಿ ಹತ್ತಾರು ಪಟ್ಟು ಹೆಚ್ಚಿದೆ. ಅದಾನಿ ಏಷ್ಯಾದ 2ನೇ ಅತಿ ದೊಡ್ಡ ಶೀಮಂತ ಎನ್ನುವ ಪಟ್ಟಗಳಿಸಿದ್ದಾರೆ, ಇದು ಮೋದಿ ಸರ್ಕಾರದ ಕೃಪಾಕಟಾಕ್ಷದಿಂದ ಆಗಿದ್ದು ಎನ್ನುವುದಕ್ಕೆ ಬೇರೆ ಉದಾಹರಣೆ
ಬೇಕಿಲ್ಲ. ಈ ಹಿನ್ನಲೆಯಲ್ಲಿ ಇಂತಹ ಅತ್ಯಂತ ಜನ ವಿರೋಧಿ, ಜೀವ ವಿರೋಧಿಯಾಗಿರುವ ಈ ಕೇಂದ್ರ-ರಾಜ್ಯ ಸರ್ಕಾರಗಳಿಗೆಳಿ ತಕ್ಕ ಪಾಠ ಕಲಿಸಲು, ಜಲ್ಲಾ ಸಮಿತಿಗಳಲ್ಲಿ ರಚಿಸಿಕೊಂಡು, ಮುಂದಿನ ದಿನಗಳಲ್ಲಿ ಜನತೆ ಬಲಿಷ್ಠ ಹೋರಾಟಕ್ಕೆ ಮುಂದಾಗಬೇಕೆಂದು SUCI(C) ಜಿಲ್ಲಾ ಕಾರ್ಯದರ್ಶಿಗಳಾದ ಕಾ.ರಾಧಾಕೃಷ್ಣ ಉಪಾದ್ಯ, CPI(M) ಜಿಲ್ಲಾ ಕಾರ್ಯದರ್ಶಿಗಳಾದ ಆರ್.ಎಸ್.ಬಸವರಾಜ, CPI ಜಿಲ್ಲಾ ಕಾರ್ಯದರ್ಶಿಗಳಾದ ನಾಗಭೂಷಣ್ ರಾವ್, RPI ಜಿಲ್ಲಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಅವರು ಈ ಮೂಲಕ ಕರೆ ನೀಡಿದರು.

IMG-20210601-WA0113.jpg

Email

KC Eranna

About Author

KC Eranna

Leave A Reply