ಬಳ್ಳಾರಿ – ನಾಯಕತ್ವ ಬದಲಾವಣೆ ಎಂಬುದು ಬಿಜೆಪಿ ನಾಯಕರಿಗೆ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಮುಖವಾಡ ಅಷ್ಟೇ ಹೀಗೆ ಹೇಳೋದಕ್ಕೆ ಹಲವು ಕಾರಣಗಳು ಇವೆ. ನಿಮಗೆ ನೆನಪಿದೆಯಾ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿದ್ದು. ಅದರಲ್ಲೂ ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಗಳು ಕೋಮುಗಲಭೆಯಿಂದ ಹೊತ್ತಿ ಹುರಿದಿದ್ದು ಕೊರೋಣ ನಡುವೆಯೇ ಬೆಂಗಳೂರು ಕೋಮುದಳ್ಳುರಿಯಿಂದ ಬೆಂದು ಹೋಗಿತ್ತು.ಆಗಲೂ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿ ಕೊಳ್ಳುವುದಕ್ಕೆ ಇದೆ ನಾಯಕತ್ವ ಬದಲಾವಣೆಯ ನಾಟಕವಾಡಿತ್ತು.

ಈಗ ಬಿಜೆಪಿ ಮತ್ತೆ ಆಡಳಿತ ವೈಫಲ್ಯಗಳನ್ನು ಮುಚ್ಚಿ ಕೊಳ್ಳುವುದಕ್ಕೆ ಅದೇ ನಾಟಕವನ್ನು ಶುರುವಿಟ್ಟು ಕೊಂಡಿದೆ. ಕೋವಿಡ್ ನಿರ್ವಹಣೆಯಲ್ಲಿ ಯಡಿಯೂರಪ್ಪ ಸರ್ಕಾರ ಅನುಭವಿಸಿದ ಮುಖಭಂಗ ಇಡೀ ರಾಜ್ಯಕ್ಕೆ ಗೊತ್ತಿದೆ. ಲಸಿಕೆ ಕೊರತೆ,ಆಕ್ಸಿಜನ್ ಕೊರತೆಯಿಂದ ನೂರಾರು ರೋಗಿಗಳು ಸಾವನ್ನಪ್ಪಿದ್ದು, ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದ್ದು ಇದರಿಂದ ಬಿಜೆಪಿ ವರ್ಚಸ್ಸಿಗೂ  ಧಕ್ಕೆಯುಂಟಾಗಿದೆ. ಏನಾದರೂ ಮಾಡಿ ಬಿಜೆಪಿ ತನ್ನ ಈ ಆಡಳಿತ ದೌರ್ಬಲ್ಯಗಳನ್ನು ಜನರಿಂದ ಮರೆಮಾಚಬೇಕು. ಅವರ ಗಮನವನ್ನು ಬೇರೆಡೆ ಸೆಳೆಯ ಬೇಕು. ಹೀಗಾಗಿ ಅದು ಮತ್ತೊಮ್ಮೆ ನಾಯಕತ್ವ ಬದಲಾವಣೆಯ ನಾಟಕವಾಡುತ್ತಿದೆ. ಹೋಗ್ಲಿ ಇದು ಪಕ್ಷದ ಆಂತರಿಕ ಬಂಡಾಯ. ಕೆಲವು ಅತೃಪ್ತ ಶಾಸಕರು ಇದರ ಹಿಂದಿದ್ದಾರೆ ಎಂದರೆ ಅವರ ವಿರುದ್ಧ ನೀವ್ಯಾಕೆ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ. ಇಂಥವರ ಬಗ್ಗೆ ಹೈಕಮಾಂಡ್  ಮೌನವಹಿಸಿರುವುದು ಯಾಕೆ?

ಒಟ್ಟಾರೆ ನಾಯಕತ್ವ ಬದಲಾವಣೆ ಎಂಬುದು ಕಮಲ ಪಾಳಯದ ಒಂದಿಷ್ಟು ಶಾಸಕರಲ್ಲಿ ಅಸಮಾಧಾನ ಸೃಷ್ಟಿಸಿದೆ ಎನ್ನಲಾಗುತ್ತಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಈ ನಾಯಕತ್ವ ಬದಲಾವಣೆ ಎಂಬ ಬಿಜೆಪಿ ನಾಟಕದಿಂದ ರಾಜ್ಯದ ಜನರಂತೂ ರೋಸಿಹೋಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಜನರಿಗೆ ಬೇಕಾಗಿರುವುದು ಸಿಎಂ ಯಾರಾಗಬೇಕು ಎಂಬುದಲ್ಲ. ಕೋವಿಡ್ ನಿಯಂತ್ರಣ ಹೇಗೆ? ಅದರಿಂದ ರಾಜ್ಯವನ್ನು ಪಾರು ಮಾಡುವುದು ಹೇಗೆ? ಎಂಬುದಷ್ಟೇ ಮುಖ್ಯ. ಜನರಿಗೆ ಬೇಕಾಗಿರೋದು ಪ್ರಾಣ ರಕ್ಷಣೆ ಹೊರತು ನಿಮ್ಮ ಸಿಎಂ ಗಿರಿಯಲ್ಲ, ಅದರಿಂದ ಅವರಿಗೆ ಆಗಬೇಕಾದ್ದು ಸಹ  ಏನಿಲ್ಲ…

ಸ್ವಾಮಿ, ಇನ್ನಾದರೂ ಈ ನಾಟಕ ನಿಲ್ಲಿಸಿ, ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸಿ… ನೀವೇ ಘೋಷಿಸಿರುವ ಕೋವಿಡ್ ಪರಿಹಾರವನ್ನು ಸಂತ್ರಸ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply