ಬೆಂಗಳೂರು – ಸಾರಿಗೆ ನೌಕರರು ನಾಳೆ ನಡೆಸಲಿರುವ ಮುಷ್ಕರದ ಬಿಸ ಸರ್ಕಾರಕ್ಕೆ ಈಗಾಗಲೇ ತಟ್ಟಿದೆ. ಒಂದು ವೇಳೆಯಲ್ಲಿ ಸಾರಿಗೆ ನೌಕರರು ಮುಷ್ಕರ‌ ಮಾಡಿದ್ದೇ ಆದಲ್ಲಿ ಯಸ್ಮಾ ಜಾರಿ ಮಾಡುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು  ಸಾರಿಗೆ ನೌಕರರ ಈಗಾಗಲೇ  8 ಬೇಡಿಕೆಗಳನ್ನು ಈಡೇರಿಸಿದ್ದೇವೆ.

ಅಲ್ಲದೇ ಶೇ.8ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಆದರೆ 6ನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಕರೋನಾ ಬಂದಾ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಸಂಭವಿಸಿದೆ‌  ಲಾಕ್ ಡೌನ್ ವೇಳೆ ಸಾರಿಗೆ ಇಲಾಖೆ ಯಲ್ಲಿ ಹಣ ಇರಲಿಲ್ಲ ಸರ್ಕಾರದ ಖಜಾನೆಯಿಂದ ಹಣ ತಂದು ನೌಕರರ ಸಂಬಳ ಪಾವತಿ ಮಾಡಿದ್ದೇವೆ. ಇಲಾಖೆಗೆ ಪ್ರತಿದಿನ 4 ಕೋಟಿ ನಷ್ಟವುಂಟಾಗುತ್ತಿದೆ. ಆದರೂ ಸಂಬಳ ಪಾವತಿ ನಿಲ್ಲಿಸಿಲ್ಲ. ಆದರೆ ಒಂದು ಬೇಡಿಕೆಯಾದ 6ನೇ ವೇತನ ಆಯೋಗ ಜಾರಿ ಮಾತ್ರ ಸಾಧ್ಯವಿಲ್ಲ ಎಂದಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply