ಬಳ್ಳಾರಿ– ಇದೇ ಜ.01 ರಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಪ್ರಾರಂಭವಾಗಿರುವುದರಿಂದ ಎಲ್ಲಾ ವರ್ಗದ ಶಾಲಾ/ಕಾಲೇಜು ವಿದ್ಯಾರ್ಥಿಗಳು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಪಾಸ್ ಪಡೆಯಲು ಅನುಕೂಲವಾಗುವಂತೆ ಕಳೆದ ವರ್ಷದ ಅಂದರೆ 2019-20 ಬಸ್ ಪಾಸ್ನೊಂದಿಗೆ ಪ್ರಸ್ತುತ ಸಾಲಿನ ಶಾಲಾ/ಕಾಲೇಜುಗಳಿಗೆ ಪಾವತಿಸಿರುವ ರಸೀದಿ ಜೊತೆಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾದಲ್ಲಿರುವ ಶಾಲಾ ಅಥವಾ ಕಾಲೇಜುಗಳಿಗೆ ತೆರಲು ಜ.31ರವರೆಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ಹೊಸಪೇಟೆಯ ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ರಿಯಾಯಿತಿ ಬಸ್ ಪಾಸ್ಗಳ ಮಾನ್ಯತೆಯನ್ನು ಸದುಪಯೋಗವನ್ನು ಪಡೆದುಕೊಳ್ಳಲು ಮತ್ತು ಪ್ರಸಕ್ತ ವರ್ಷದಲ್ಲಿ ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿಸಲ್ಲಿಸಿ ಪಾಸ್ ಪಡೆಯಲು ಕೋರಲಾಗಿದೆ.

Leave A Reply