ಸ್ಟಾರ್ ನಟಿಯೊಂದಿಗೆ ನಟಿಸಲಿರುವ ಸ್ಟೈಲಿಶ್ ಸ್ಟಾರ್  ಪುತ್ರಿ…!

0

ಹೈದ್ರಾಬಾದ್

ನಟ ನಟಿಯರ ಪುತ್ರ- ಪುತ್ರಿಯರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರ ರಂಗಕ್ಕೆ ಪ್ರವೇಶ ಪಡೆಯುವುದು ಸರ್ವೆ ಸಾಮಾನ್ಯ. ಹಾಗೇಯೇ ಖ್ಯಾತ ಸ್ಟಾರ್ ನಟನ ಪುತ್ರಿ. ಸ್ಟಾರ್ ನಟಿಯೊಂದಿಗೆ ನಟನೆ ಮಾಡುತ್ತಿದ್ದಾರೆ.

ಹೌದು ಸ್ಟೈಲಿಶ್ ಸ್ಟಾರ್ ಅಲ್ಲುಅರ್ಜುನ್ ಪುತ್ರಿ ಅಲ್ಲು ಅರ್ಹಾ ಸ್ಟಾರ್ ನಟಿಯಾಗಿರುವ ಸಮಂತಾ ಅಕ್ಕಿನೇನಿ  ಅವರೊಂದಿಗೆ ಚಿತ್ರದಲ್ಲಿ ನಟನೆ ಮಾಡಲಿದ್ದಾರೆ. ಗುಣಶೇಖರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ  ಶಾಕುಂತಲಂ ಸಿನಿಮಾದಲ್ಲಿ, ಅಲ್ಲು ಅರ್ಹಾ ಭರತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಮಗಳಿಗೆ ದೊರೆತಿರುವ ಈ ಅವಕಾಶಕ್ಕೆ ಅಲ್ಲು ಅರ್ಜುನ್ ಅವರು ಸಂತಸ ವ್ಯಕ್ತ ಪಡಿಸಿದ್ದಾರೆ. ಮಗಳಿಗೆ ಅವಕಾಶ ನೀಡಿರುವ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply