ಬಳ್ಳಾರಿ- ಯಶಸ್ವಿಯಾಗಿ ಜರುಗಿದ ಜನನಿ ಮಹಿಳಾ ಸಬಲೀಕರಣ ಸಮಿತಿಯ ವಿಶೇಷ ಕಾರ್ಯಕಾರಿಣಿ, ಸಾವಿತ್ರಿ ಬಾಫುಲೆ ಜಯಂತಿ ಹಾಗೂ ಮಹಿಳೆಯರ ನೈರ್ಮಲ್ಯೀಕರಣ  ತರಬೇತಿ ಕಾರ್ಯಕ್ರಮ ಇಂದು ಎಂ.ಜೆ.ನಗರದ ಶೀಲ್ ಚಂದನ್ ದರ್ಮ ವಟೀಕಾದಲ್ಲಿ ಜನನಿ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಹಂಪಿ ಕನ್ನಡ ವಿ.ವಿ.ಯ ಚರಿತ್ರೆ ವಿಭಾಗದ ಮುಖ್ಯಸ್ಥರಾದ ಚಿನ್ನಸ್ವಾಮಿ ಸೋಸಲೆಯವರು ಸಾವಿತ್ರಿ ಬಾಫುಲೆರವರ ಜೀವನದ ಬಗ್ಗೆ ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿ ಸಂಪದರವರು ಮಹಿಳೆಯರ ನೈರ್ಮಲ್ಯೀಕರಣದ ಬಗ್ಗೆ ಬಹುಮುಖ್ಯ ವಿಷಯಗಳನ್ನು ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. 20ಕ್ಕೂ ಹೆಚ್ಚು ಸದಸ್ಯರು ಸಮಿತಿಗೆ ಸೇರ್ಪಡೆಗೊಂಡರು ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಈ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸೇರಿದಂತೆ ಇತರರು ಉಪಸ್ಥಿತರಿದ್ದರು

About Author

Priya Bot

Leave A Reply