ಯಾದಗಿರಿ- ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ನಡೆದಿದೆ..  ಗ್ರಾಮದ ಶರಣಬಸವ (23), ಶೇಖಮ್ಮ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಬೆಂಗಳೂರಲ್ಲಿ ಗಾರೆ ಕೆಲ್ಸ ಮಾಡ್ಕೊಂಡಿದ್ದ ಶರಣಬಸವ ಸಂಕ್ರಾಂತಿ ಹಬ್ಬಕ್ಕೆ ಅಂತಾ ಯಾದಗಿರಿಗೆ ಬಂದಿದ್ದ.ಶೇಖಮ್ಮ ಗ್ರಾಮದಲ್ಲೇ ಇದ್ಕೊಂಡು ಕಾಲೇಜು ಹೋಗುತ್ತಿದ್ದಳು.ಇಬ್ಬರ ಮಧ್ಯೆ ಸುಮಾರು ಎರಡು ವರ್ಷದಿಂದ ಪ್ರೀತಿ ಇತ್ತು. ಆದ್ರೆ, ಶರಣಬಸವನ ತಂದೆ ಮೈಲಾರಪ್ಪ ಪ್ರೀತಿ ಪ್ರೇಮ ಸರಿಯಲ್ಲ. ಜೀವನದ ಕಡೆ ಗಮನ ಕೊಡು ಅಂತಾ ಬುದ್ಧಿ ಹೇಳಿದ್ರಂತೆ. ಹೀಗಾಗಿ ಶರಣಬಸವ ಸುಮ್ಮನಾಗಿದ್ದ.

ಆದ್ರೆ ಬೆಂಗಳೂರಿಂದ ಊರಿಗೆ ಬಂದಿದ್ದ ಶರಣಬಸವ ಶೇಖಮ್ಮನನ್ನ ಭೇಟಿಯಾಗೋದಕ್ಕೆ ಮುಂದಾಗಿದ್ದ. ನಿನ್ನೆ ರಾತ್ರಿ  ಗುಂಡಗುರ್ತಿ ಗ್ರಾಮದ ದೊಡ್ಡಪ್ಪನ ಮನೆಯಲ್ಲಿ ಭೇಟಿಯಾಗೋದಕ್ಕೆ ಪ್ಲಾನ್ ಮಾಡಿದ್ದ. ರಾತ್ರಿ ಅಲ್ಲೇ ಭೇಟಿಯಾಗಿ, ಮದ್ವೆ ವಿಚಾರಕ್ಕೆ ಪೋಷಕರು ವಿರೋಧ ವ್ಯಕ್ತವಾಗಿರೋ ಬಗ್ಗೆ ಮಾತ್ನಾಡಿಕೊಂಡು, ನಂತ್ರ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಶಹಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಮೃತ ಕುಟುಂಬಸ್ಥರ ಅಕ್ರಂದನ ಮುಗಿಲು ಮಟ್ಟಿದೆ.

About Author

Priya Bot

Leave A Reply