ತಮ್ಮ ಗುಂಡಿ ತಾವೇ ತೋಡಿಕೊಂಡರಾ ಕುಮಾರಸ್ವಾಮಿ..?

0

ಮಂಡ್ಯ  – ಕ್ಷಣಕ್ಷಣಕ್ಕೂ ರೋಚಕ ವಾಗುತ್ತಿರುವ ಸಂಸದೆ ಸುಮಲತಾ ಹಾಗೂ ದಳಪತಿಗಳ ಮಧ್ಯೆ ಮಾತಿನ ಚಕಮಕಿ ಇನ್ನೂ ಮುಂದುವರಿದೆ. ನಿನ್ನೆ ಕುಮಾರಸ್ವಾಮಿ ಅವರು ಕದನ ವಿರಾಮ ಹೇಳಿ ಟ್ವೀಟ್ ಮಾಡಿದ್ದರು. ಇನ್ನು ಇದೆಲ್ಲಾ ಮುಗಿತು ಅನ್ನುವಷ್ಟರಲ್ಲಿ ಮತ್ತೆ ಸುಮಲತಾ ಅಂಬರೀಶ್ ಅವರು ದಳಪತಿಗಳಿಗೆ ಟಾಂಗ್ ಕೊಡಲಿ ಸಜ್ಜಾಗಿದ್ದಾರೆ.

ಇದೀಗ ಸಂಸದೆ ಸುಮಲತಾ ಅವರು ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಕೇಸರಿ ಭಾವುಟವನ್ನು ಹಾರಿಸಿದ್ದಾರೆ.  ಅಕ್ರಮ ಗಣಿಗಾರಿಕೆಯನ್ನು ಬಯಲು ಮಾಡಲು ಸಜ್ಜಾಗಿದ್ದಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅಕ್ರಮ ಗಣಿಗಾರಿಕೆಯನ್ನು ಬಯಲುಮಾಡಲು ಪ್ರೇರೇಪಿಸಿದ್ದು‌ ಜೆಡಿಎಸ್ ನಾಯಕರೇನಾ ಎನ್ನುವಂತಾಗಿದೆ. ಏಕೆಂದರೆ ಪದೇಪದೇ ಮೇಲಿಂದ ಮೇಲೆ ಇವರಿಬ್ಬರ ಮಾತು ಕತೆ ಮಧ್ಯ ಜೆಡಿಎಸ್ ನಾಯಕರು ಕರೋನಾ ಸಮಯದಲ್ಲಿ ಸುಮಲತಾ ಅವರು ಸರಿಯಾಗಿ ನಿಭಾಯಿಲ್ಲ ಹೀಗೆ ಹಲವಾರು ಆರೋಪಗಳನ್ನು ಮಾಡುತ್ತಿದ್ದರು.

ಸುಮಲತಾ ಅವರು ಕುಮಾರಸ್ವಾಮಿ ಅವರು ಮಾಡಿದ ಎಲ್ಲ ಆರೋಪಗಳು ತಳ್ಳಿ ಹಾಕುತ್ತಿಲ್ಲ ಅವುಗಳನ್ನು ಪರೋಕ್ಷವಾಗಿ ಬಳಸಿಕೊಳ್ಳುತ್ತಿದ್ದಾರಾ .ಅವರು ಮಾಡಿದ ಆರೋಪಗಳಿಗೆ ತಕ್ಕಂತೆ ಉತ್ತರವನ್ನು ಕೊಡಲು ಸಿದ್ದವಾಗಿದ್ದಾರಾ ಇದಕ್ಕೆ ಅಕ್ರಮ ಗಣಿ ಗನಿಗಾರಿಕೆ ತಂತ್ರವನ್ನು ಅವರು ಬಳಸುತ್ತಿದ್ದಾರೆ. ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಯಲು ಮಾಡಲು ಹೊರಟಿದ್ದಾರೆ.ಸದ್ಯದಲ್ಲೇ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈ ವಿಷಯದ ಕುರಿತು  ಸಿಎಂ ಯಡಿಯೂರಪ್ಪ ಅವರೊಂದಿಗೆ ಹಾಗೂ ಗಣಿ  ಸಚಿವರನ್ನು ಭೇಟಿಯಾಗುತ್ತಿದ್ದಾರೆ. ಇನ್ನು ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಬೇಕಾದಂತಹ ಎಲ್ಲ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇದನ್ನೆಲ್ಲ ನೋಡಿದರೆ ಜೆಡಿಎಸ್ ನವರೇ ತಮ್ಮ ಗುಂಡಿಯನ್ನು ತಾವೇ ತೆಗೆದುಕೊಂಡ್ರಾ ಎನ್ನುವ ಪ್ರಶ್ನೆ‌ಎದ್ದು ಕಾಡುತ್ತದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply