ಹುಬ್ಬಳ್ಳಿ- ದೆಹಲ್ಲಿಯಲ್ಲಿ ರೈತ ವಿರೋಧಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿನ್ನೆಯಲ್ಲಿ ಹುಬ್ಬಳ್ಳಿಯಲ್ಲಿ ಇಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ ಅವರು ಸುದ್ದಿಗೋಷ್ಟಿ ನಡೆಸಿದರು.
ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು ಈಗಾಗಲೇ ದೇಶದ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದಾರೆ. ಕೇಂದ್ರ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸಿ ಜನತಂತ್ರ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ರೈತರ ಹೋರಾಟವನ್ನು ಹತ್ತಿಕ್ಕುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ತಮ್ಮ ಪರಮಾವಧಿಯನ್ನು ಮೆರೆಯುತ್ತಿದೆ, ಎಂದು ಹೇಳಿದರು.
ದೆಹಲಿಯ ಕೊರೆಯುವ ಚಳಿಯನ್ನುಲಿಕ್ಕಿಸದೇ ಸಾಕಷ್ಟು ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸರ್ಕಾರ ಇದುವರೆಗೆ 9 ಸಭೆಗಳನ್ನು ಮಾಡಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸುಖಾ ಸುಮ್ಮನೆ ನಾಟಕದ ಸಭೆಗಳನ್ನು ಮಾಡುತ್ತಿದೆ. ಈಗಲೂ ಕೇಂದ್ರ ಸರ್ಕಾರ ಮಾಡಿದ ರೈತ ವಿರೋಧಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಮಾಡುತ್ತಿದೆ. ರೈತರನ್ನು ಉದ್ಯಮ ಕಂಪನಿಗಳಿಗೆ ಬಲಿ ಕೊಡುವ ಕೆಲಸ ನಡೆಸುತ್ತಿದೆ.
ದೆಹಲಿಯ ಪ್ರತಿಭಟನೆಗೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ ಅವರು ಬೆಂಬಲ ಸೂಚಿಸಿದ್ದಾರೆ ಹಾಗಾಗೀ ಜನೇವರಿ 26 ರಂದು ಕರ್ನಾಟಕ ರೈತ ಸಂಘಟನೆಗಳು ಮತ್ತು ರೈತ ಮುಖಂಡರು ದೆಹಲಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ 13 ಸಾವಿರಕ್ಕೂ ಹೆಚ್ಚಿನ ಜನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ರ್ಯಾಲಿ ನಡೆಸಲಿದ್ದೆವೆ, ಒಟ್ಟಿನಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲವನ್ನು ನೀಡಲಿದ್ದೇವೆ, ಎಂದು ಮಾಹಿತಿ ನೀಡಿದರು.