ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯನ್ನು  ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಈ ದಿನ 25ನೇ  ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾ ಕನ್ನಡ ಯುವಕ ಸಂಘ ಹಾಗೂ ರೈತ ಸಂಘದ ಪದಾಧಿಕಾರಿಗಳು ಈ ದಿನದ ಹೋರಾಟಕ್ಕೆ ಬೆಂಬಲ ಸೂಚನೆ ನೀಡಿದ್ದಾರೆ.

ಜಿಲ್ಲೆಯ ಡಿಸಿ ಕಚೇರಿಯ ಎದುರು ಸ್ಥಾಪಿಸಲಾದ ತಾತ್ಕಾಲಿಕ ಟೆಂಟ್​ನಲ್ಲಿ ನಾನಾ ಸಂಘಟನೆಗಳ ಮುಖಂಡರೊಂದಿಗೆ ಯುವಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಅಖಂಡ ಬಳ್ಳಾರಿ  ಜಿಲ್ಲೆಯನ್ನು ವಿಭಜನೆ ಮಾಡೋದು ಬೇಡ  ಭಾಷಾವಾರು ವಿಂಗಡಣೆ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯನ್ನ ಅಖಂಡವಾಗಿಯೇ ಉಳಿಸಲಾಗಿತ್ತು. ಹೀಗಾಗಿ, ರಾಜ್ಯ ಸರ್ಕಾರ ಈ ಜಿಲ್ಲೆಯ ವಿಭಜನೆ ಮಾಡೋದು ಸೂಕ್ತವಲ್ಲ. ಕೂಡಲೇ ನೂತನ ವಿಜಯನಗರ ಜಿಲ್ಲೆ ರಚನೆಯನ್ನ ಕೈಬಿಡಬೇಕೆಂದು ಹಿರಿಯ ಮುಖಂಡ ಟಿ.ಜಿ.ವಿಠಲ ಒತ್ತಾಯಿಸಿದ್ದಾರೆ. ಕನ್ನಡ ಯುವಕರ ಸಂಘದ ಮುಖಂಡ ವಿ.ಎಸ್. ಬಸವರಾಜ, ಜಿಲ್ಲಾ ಹೋರಾಟ ಸಮಿತಿಯ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕೆ.ಎರ್ರಿಸ್ವಾಮಿ, ಮಾಧವರೆಡ್ಡಿ, ಗೋವಿಂದ, ನಾರಾಯಣಪ್ಪ, ಬಿ.ಎಂ.ಪಾಟೀಲ ಇದ್ದರು.

About Author

Priya Bot

Leave A Reply